Breaking News

ಹಣಕ್ಕಾಗಿ ಡಿಮ್ಯಾಂಡ್ ಮಾಡಿದ್ರಾ ಸಿಸಿಬಿ ಎಸಿಪಿ ವೆಂಕಟೇಶ್ ಪ್ರಸನ್ನ…?

ಬೆಂಗಳೂರು: ಖಡಕ್ ಅಧಿಕಾರಿ, ಸದ್ಯ ಆ್ಯಂಬಿಡೆಂಟ್ ವಂಚನೆ ಪ್ರಕರಣವನ್ನ ತನಿಖೆ ಮಾಡುತ್ತಿರುವ ಸಿಸಿಬಿ ಎಸಿಪಿ ವೆಂಕಟೇಶ್ ಪ್ರಸನ್ನ ವಿರುದ್ಧವೇ ದೂರು ದಾಖಲಾಗಿದೆ. ರಿಯಲ್ ಎಸ್ಟೇಟ್ ಉದ್ಯಮಿ ವಿಜಯ್ ಟಾಟಾ ಎಂಬುವವರು ಬ್ಲ್ಯಾಕ್ ಮೇಲೆ ಮಾಡಿರುವ ಆರೋಪ ಹೊರಿಸಿ ಎಸಿಪಿ ವೆಂಕಟೇಶ್ ಪ್ರಸನ್ನ ವಿರುದ್ಧ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ಹಾಗೂ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.ವಿಜಯ್ ಟಾಟಾ ದೂರಿನಲ್ಲೇನಿದೆ?ಆ್ಯಂಬಿಡೆಂಟ್ ಕಂಪೆನಿ ಜೊತೆಗೆ ನಮ್ಮ ರಿಯಲ್ ಎಸ್ಟೇಟ್ ಕಂಪನಿಯ ವ್ಯವಹಾರ ಇಟ್ಟುಕೊಂಡಿದ್ದೆವು. ಈ ಹಿನ್ನೆಲೆಯಲ್ಲಿ ಆ್ಯಂಬಿಡೆಂಟ್ ಕಂಪನಿ ಬಗ್ಗೆ ವಿಚಾರಣೆ ನಡೆಸಲು ನನಗೂ ಸಿಸಿಬಿ ಅಧಿಕಾರಿಗಳು ನೋಟಿಸ್ ನೀಡಿದ್ದರು. ಇದಾದ ಬಳಿಕ ನಾನು ನನ್ನ ಆ್ಯಂಬಿಡೆಂಟ್ ಕಂಪನಿಯಲ್ಲಿ ನಡೆದ ಹಣದ ಟ್ರಾನ್ಸಾಕ್ಷನ್ ಬಗ್ಗೆ ದಾಖಲೆ ಒದಗಿಸಿದ್ದೆ. ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಹಾಗೂ ಸಿಸಿಬಿ ಡಿಸಿಪಿ ಗಿರೀಶ್​​ಗೆ ದಾಖಲೆ ಒದಗಿಸಿದ್ದೆ. ಆದರೆ ಇದಕ್ಕೆ ಒಪ್ಪದ ಎಸಿಪಿ ವೆಂಕಟೇಶ್ ಪ್ರಸನ್ನ ನನಗೆ ಕರೆ ಮಾಡಿ ಕೂಡಲೇ ಸಿಸಿಬಿಗೆ ಬರುವಂತೆ ಸೂಚಿಸಿದ್ದರು. ಆದರೆ ನನ್ನ ತಂದೆಗೆ ಹುಷಾರಿಲ್ಲದ ಕಾರಣ ನಾನು ಇಂದು ಬರಲು ಸಾಧ್ಯವಿಲ್ಲ ಅಂತಾ ತಿಳಿಸಿದ್ದೆ. ಈ ಹಿನ್ನೆಲೆ ನಾನೇ ಖುದ್ದು ಡಿಸಿಪಿ ಗಿರೀಶ್ ಅವರ ಬಳಿ ಮನವಿ ಮಾಡಿ ಮುಂದಿನ ದಿನ ಬರುವುದಾಗಿ ತಿಳಿಸಿದ್ದೆ. ಇದಕ್ಕೆ ಒಪ್ಪದ ಎಸಿಪಿ ವೆಂಕಟೇಶ್ ಪ್ರಸನ್ನ, ದುಡ್ಡಿಗೆ ಡಿಮ್ಯಾಂಡ್ ಮಾಡಿದ್ದರು. ಅಲ್ಲದೇ ಕಂದಾಯ ಭವನದ ವ್ಯಕ್ತಿಯೋರ್ವರಿಗೆ ಕರೆ ಮಾಡಿ ಕೂಡಲೇ ನನ್ನ ಪ್ರಾಪರ್ಟಿ ಸೀಜ್ ಮಾಡುವಂತೆ ತಿಳಿಸಿದ್ದರು. ಇದಕ್ಕೆ ಸಂಬಂಧಪಟ್ಟ ಅಂದ್ರೆ ವೆಂಕಟೇಶ್ ಪ್ರಸನ್ನ ಅವರ ಕಾಲ್ ರೆಕಾರ್ಡ್ಸ್ ಗಳು ಕೂಡ ನನ್ನ ಬಳಿ ಇವೆ. ಅಲ್ಲದೇ ಮಾಧ್ಯಮಗಳಿಗೆ ನನ್ನ ಹೆಸರು ಹೇಳಿ ನನ್ನನ್ನು ಬಂಧಿಸುವಂತೆ ಒತ್ತಡ ಹೇರುವೆ ಎಂದು ಬೆದರಿಕೆಯೊಡ್ಡಿದ್ದಾರೆ. ಇನ್ನೂ, ಈಗಾಗಲೇ ಕೆಲ ಫ್ರಾಡ್ ಕಂಪನಿಗಳ ತನಿಖೆ ನಡೆಸುತ್ತಿರುವ ಸಿಸಿಬಿ ಆಫೀಸರ್ಸ್ ಬಗ್ಗೆ ನನಗೆ ಒಳ್ಳೆ ಅಭಿಪ್ರಾಯ ಇದೆ. ಆದರೆ ಇದೀಗ ಎಸಿಪಿ ವೆಂಕಟೇಶ್ ಪ್ರಸನ್ನ ಅವರು ನಡೆದುಕೊಳ್ಳುತ್ತಿರುವುದು ಸರಿಯಿಲ್ಲ. ಇದರಿಂದ ನಿಮ್ಮ ಇಲಾಖೆಗೇ ಕಪ್ಪು ಚುಕ್ಕೆ ತರುವ ರೀತಿಯಲ್ಲಿ ವೆಂಕಟೇಶ್

Share News

About Shaikh BIG TV NEWS, Hubballi

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *