Breaking News

ಫಲಪುಷ್ಟ ಪ್ರದರ್ಶನ ಹಾಗೂ ಆಹಾರ ಮೇಳ ವೀಕ್ಷಿಸಿದ ಡಾ.ಹೆಚ್.ಸಿ.ಮಹದೇವಪ್ಪ….

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಕುಪ್ಪಣ್ಣ ಉದ್ಯಾನದಲ್ಲಿ ಆಯೋಜಿಸಿರುವ ಫಲಪುಷ್ಟ ಪ್ರದರ್ಶನ ಹಾಗೂ ಸೌಟ್ಸ್ ಮತ್ತು ಗೈಡ್ ಮೈದಾನದಲ್ಲಿನ ಆಹಾರ ಮೇಳಕ್ಕೆ ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ಗುರುವಾರ ಸಂಜೆ ಭೇಟಿ ನೀಡಿ ವೀಕ್ಷಿಸಿದರು.

ಮೊದಲಿಗೆ ದಸರಾದ ಪ್ರಮುಖ ಆಕರ್ಷಣೆಯಲ್ಲಿ ಒಂದಾದ ಫಲಪುಷ್ಟ ಪ್ರದರ್ಶನಕ್ಕೆ ಭೇಟಿ ನೀಡಿದ ಸಚಿವರು, ಗಾಜಿನ ಮನೆಯಲ್ಲಿ ಸಾವಿರಾರು ಹೂಗಳಿಂದ ಅರಳಿರುವ ಇಸ್ರೋ ವಿಜ್ಞಾನಿಗಳ ಸಾಧನೆಯಾದ ಚಂದ್ರಯಾನ-3 ಕಲಾಕೃತಿಯನ್ನು ಕಂಡು ಮನಸೋತರು

ಬಳಿಕ ಜನಾಕರ್ಷಣೆಯಾಗಿರುವ ಸರ್ಕಾರದ ಮಹತ್ವದ ಗ್ಯಾರಂಟಿ ಯೋಜ‌ನೆಗಳಾದ ಕೆಎಸ್‌ಆರ್‌ಟಿಸಿಯ ಬಸ್ ಮಾದರಿಯ ಶಕ್ತಿ ಯೋಜನೆ, ವಿದ್ಯುತ್ ಬಲ್ಬ್ ಮತ್ತು ಕಂಬದ ಪ್ರತಿಕೃತಿಯಲ್ಲಿನ ಗೃಹಜ್ಯೋತಿ ಮತ್ತು ಎರಡು ಸಾವಿರ ರೂ. ಗೃಹಲಕ್ಷ್ಮಿ ಯೋಜನೆಗಳ ಪ್ರತಿಕೃತಿಗಳನ್ನು ಕಣ್ತುಂಬಿಕೊಂಡು ಮೆಚ್ಚುಗೆ ಸೂಚಿಸಿದರು. ವಾಕಿಂಗ್ ಪಾಥ್‌ನಲ್ಲಿ ಹೂ ಕುಂಡಗಳಲ್ಲಿ ಜೋಡಿಸಿರುವ ವಿವಿಧ ಬಗೆಯ ಹೂಗಳು ಸೂಸುವ ಚಲುವನ್ನು ಆಸ್ವಾದಿಸಿದರು

Share News

About BigTv News

Check Also

ಹುಬ್ಬಳ್ಳಿಯ ಸ್ಪಾಗಳ ಕರಾಳ ಮುಖ..! ಮಸಾಜ್ ಹೆಸರಿನಲ್ಲಿ ಅಕ್ರಮ ದಂಧೆಯ ಶಂಕೆ — ಕಮಿಷನರ್ ಸಾಹೇಬರೇ, ಇತ್ತ ಗಮನ ಹರಿಸಿ!

ಸ್ಪಾಗಳ ಒಳಗೆ ನಡೆಯುತ್ತಿದೆಯಾ ಅಕ್ರಮದ ಆಟ..? ದಂಧೆ ಸಾಬೀತಾದರೆ ಬುಲ್ಡೋಜರ್ ಕ್ರಮ ಬೇಡ, ಕಾನೂನಿನ ಕಠಿಣ ಕ್ರಮವಾಗಲಿ! ಮಸಾಜ್ ಹೆಸರಿನಲ್ಲಿ …

Leave a Reply

Your email address will not be published. Required fields are marked *