ರೂಪಾಂತರಿ ಕೊರೊನಾ ವೈರಸ್ ಭೀತಿ : ಐಸಿಸಿ ಮಹಿಳಾ ವಿಶ್ವಕಪ್​ ಕ್ವಾಲಿಫೈಯರ್ ಟೂರ್ನಿ ರದ್ದು

Thumbnail image
ನ್ಯೂಜಿಲ್ಯಾಂಡ್​ನಲ್ಲಿ 2022ಕ್ಕೆ ನಡೆಯಲಿರುವ ಏಕದಿನ ವಿಶ್ವಕಪ್​ಗೆ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ವೆಸ್ಟ್​ ಇಂಡೀಸ್ ತಂಡಗಳು ಅರ್ಹತೆ ಪಡೆದಿವೆ. ಈಗಾಗಲೇ ಭಾರತ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್​, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್​ ತಂಡಗಳು ನೇರ ಅರ್ಹತೆ ಪಡೆದುಕೊಂಡಿವೆ..

ದುಬೈ : ಕೋವಿಡ್-19 ಕಾರಣದಿಂದ ಐಸಿಸಿ 2022ರ ಏಕದಿನ ವಿಶ್ವಕಪ್​ ಅರ್ಹತಾ ಟೂರ್ನಿಯನ್ನು ರದ್ದುಗೊಳಿಸಿದೆ. ಹಾಗಾಗಿ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ವೆಸ್ಟ್ ತಂಡಗಳು ಪ್ರಸ್ತುತ ಶ್ರೇಯಾಂಕದ ಆಧಾರದ ಮೇಲೆ ವಿಶ್ವಕಪ್​ಗೆ ಅರ್ಹತೆಗಿಟ್ಟಿಸಿಕೊಂಡಿವೆ.

ದಕ್ಷಿಣ ಆಫ್ರಿಕಾದಲ್ಲಿ ರೂಪಾಂತರಿ ಕೊರೊನಾ ವೈರಸ್ ಪತ್ತೆಯಾಗಿರುವುದರಿಂದ ಜಿಂಬಾಬ್ವೆ ಸೇರಿದಂತೆ ಹಲವು ಆಫ್ರಿಕನ್​ ರಾಷ್ಟ್ರಗಳು ಪ್ರಯಾಣ ನಿರ್ಬಂಧಗಳನ್ನು ಹೇರುತ್ತಿವೆ.

ಹಾಗಾಗಿ, 9 ತಂಡಗಳ ನಡುವೆ ಜಿಂಬಾಬ್ವೆಯಲ್ಲಿ ನಡೆಯುತ್ತಿದ್ದ ಅರ್ಹತಾ ಟೂರ್ನಿಯನ್ನು ರದ್ದುಗೊಳಿಸಲಾಗಿದೆ. ಐಸಿಸಿ ಶ್ರೇಯಾಂಕದ ಆಧಾರದ ಮೇಲೆ ತಂಡಗಳನ್ನು ವಿಶ್ವಕಪ್​ಗೆ ಆಯ್ಕೆ ಮಾಡಲಾಗುವುದು ಎಂದು ಐಸಿಸಿ ಪ್ರಕಟಣೆ ಹೊರಡಿಸಿದೆ.

ನ್ಯೂಜಿಲ್ಯಾಂಡ್​ನಲ್ಲಿ 2022ಕ್ಕೆ ನಡೆಯಲಿರುವ ಏಕದಿನ ವಿಶ್ವಕಪ್​ಗೆ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ವೆಸ್ಟ್​ ಇಂಡೀಸ್ ತಂಡಗಳು ಅರ್ಹತೆ ಪಡೆದಿವೆ. ಈಗಾಗಲೇ ಭಾರತ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್​, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್​ ತಂಡಗಳು ನೇರ ಅರ್ಹತೆ ಪಡೆದುಕೊಂಡಿವೆ.

Share News

About admin

Check Also

ಬೆಲೆ ಏರಿಕೆ ಕುರಿತು ಸಿಹಿ ಸುದ್ದಿ ನೀಡಿದ ಸಿಎಂ

ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್, ಹಾಲಿನ ದರ ಏರಿಕೆ ಮಾಡಲು ಚಿಂತನೆ ನಡೆದಿತ್ತು. ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿದಂತೆ …

Leave a Reply

Your email address will not be published. Required fields are marked *

You cannot copy content of this page