ಹಾವೇರಿ :ಹಾವೇರಿ ಜಿಲ್ಲೆಯಲ್ಲಿ ಹೋರಿ ಬೆದರಿಸುವ ಸ್ಪರ್ಧೆ ಎಂದರೆ ಯುವಕರಿಗೆ ಅಷ್ಟೇ ಅಲ್ಲ ವೃದ್ದರಿಗೂ ಎಲ್ಲಿಲ್ಲದ ಪ್ರೀತಿ. ಪ್ರತಿ ವರ್ಷದಂತೆ ಈ ವರ್ಷವೂ ಹಾವೇರಿ ಜಿಲ್ಲೆಯಲ್ಲಿ ಹೋರಿ ಬೆದರಿಸುವ ಸ್ಪರ್ಧೆ ನಡಿತಾ ಇದೆ.

ಅದರಲ್ಲೂ ಹಾವೇರಿ ತಾಲ್ಲೂಕಿನ ಬಸಾಪುರ ಗ್ರಾಮದಲ್ಲಿ ಒಂದು ವಾರದ ಹಿಂದೆ ನಡೆಯಬೇಕಾಗಿದ್ದ ಸ್ಪರ್ಧೆ ಮಳೆಯ ಅವಾಂತರದಿದ ರದ್ದಾಗಿತ್ತು. ನಂತರ ಮಳೆಪ್ರಮಾಣ ಕಡಿಮೆಯಾಗುತ್ತಿದ್ದಂತೆ ಮತ್ತೆ ಭಾರಿ ಹೋರಿ ಬೆದರಿಸು ಸ್ಪರ್ಧೆ ನಿಯೋಜನೆ ಗೊಂಡಿದೆ. ಇದರಲ್ಲಿ ಸಾಕಷ್ಟು ಅವಘಡಗಳು ಸಂಭವಿಸಿವೆ. ಹೌದು ಹೋರಿಗಳು ಯುವಕರನ್ನು ವೃದ್ಧರನ್ನು ಸೇರಿದಂತೆ ಅನೇಕರನ್ನು ಎತ್ತಿ ಬಿಸಾಡಿವೆ. ಈ ಸಂದರ್ಭದಲ್ಲಿ ಕೆಲವರ ಜೀವ ಹಾರಿ ಹೋದರೆ ಇನ್ನು ಕೆಲವರ ಜೀವ ಚಿಂತಾಜನಕ ಆಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

