ಅಸ್ಸಾಂನ ಹೊಜೈ ಜಿಲ್ಲೆಯಲ್ಲಿ ಶನಿವಾರ ರೈಲು ಡಿಕ್ಕಿಯಾಗಿ 7 ಆನೆಗಳು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ವರದಿ ಕೇಳಿದೆ ಎಂದು ಕೇಂದ್ರ ಸಚಿವ ಭೂಪೇಂದರ್ ಯಾದವ್ ಭಾನುವಾರ ಹೇಳಿದ್ದಾರೆಬಂಗಾಳದ ಸುಂದರ್‌ಬನ್ಸ್‌ನಲ್ಲಿ ಆನೆ ಮತ್ತು ರಾಷ್ಟ್ರೀಯ ಹುಲಿ ಯೋಜನೆಯ ಸಂರಕ್ಷಣಾ ಪ್ರಾಧಿಕಾರದ ಸಭೆ ಬಳಿಕ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈಲ್ವೆ ಹಳಿಗಳಲ್ಲಿ ಆನೆಗಳ ಚಲನೆಯನ್ನು ಮೇಲ್ವಿಚಾರಣೆ ಮಾಡಲು ಎಲ್ಲಾ ರಾಜ್ಯಗಳ ರೈಲ್ವೆ ಇಲಾಖೆ ಮತ್ತು ಅರಣ್ಯ ಇಲಾಖೆಗೆ ಕೋರಲಾಗಿದೆ.ಲೋಕೋ ಪೈಲಟ್‌ಗಳು ಮತ್ತು ಅರಣ್ಯ ಅಧಿಕಾರಿಗಳ ನಡುವೆ ಸಮನ್ವಯ ಅತ್ಯಗತ್ಯ ಎಂದು ಭೂಪೇಂದರ್ ಅವರು ಹೇಳಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

