ಅಂಗನವಾಡಿ ಕೇಂದ್ರಕ್ಕೆ ಒತ್ತಾಯಿಸಿ ಬಿದಿಗೆ ಇಳಿದ ಗ್ರಾಮಸ್ಥರು: ಮಕ್ಕಳು ಸಮೇತ ರಸ್ತೆ ತಡೆದು ಆಕ್ರೋಶ

ಧಾರವಾಡ: ಕಳೆದ ಹನ್ನೊಂದು ವರ್ಷಗಳಿಂದ ಶಾಶ್ವತ ಅಂಗನವಾಡಿ ಕಟ್ಟಡ ನೀಡದೆ ಇರುವುದನ್ನು ಖಂಡಿಸಿ ಹಾಗೂ ಶಾಶ್ವತ ಅಂಗನವಾಡಿ‌ ಕಟ್ಟಡಕ್ಕೆ ಆಗ್ರಹಿಸಿ, ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಗ್ರಾಮಸ್ಥರೇ ತಮ್ಮ ಮಕ್ಕಳ ಸಮೇತವಾಗಿ ಬಿದಿಗೆ‌ ಇಳಿದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ‌

ಹೆಬ್ಬಳ್ಳಿ ಗ್ರಾಮದ ಶಿವಾಜಿ ವೃತದಲ್ಲಿ ಗ್ರಾಮಸ್ಥರು ತಮ್ಮ ಚಿಕ್ಕ ಚಿಕ್ಕ ಮಕ್ಕಳೊಂದಿಗೆ ರಸ್ತೆಲ್ಲಿಯೇ ಕಲಿಕಾ ಪ್ರಕ್ರಿಯೆಗೆ ಮುಂದಾಗುವ‌ ಮೂಲಕ ರಸ್ತೆ ಸಂಪೂರ್ಣ ಬಂದ್ ಮಾಡಿ, ಗ್ರಾಮ ಪಂಚಾಯತಿ ಪಿಡಿಓ ಹಾಗೂ ಪಂಚಾಯತಿ ಜನಪ್ರತಿನಿಧಿಗಳ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ಹೊರಹಾಕಿದರು.

ಕಳೆದ ಹನ್ನೊಂದು ವರ್ಷಗಳಿಂದ ಗ್ರಾಮದ 12 ನೇ ಅಂಗನವಾಡಿ ಕೇಂದ್ರ ಮಕ್ಕಳಿಗೆ ಶಾಶ್ವತ ಅಂಗನವಾಡಿ ಕೇಂದ್ರವಿಲ್ಲ. ಇದರಿಂದಾಗಿ ಮಕ್ಕಳು ಹಾಗೂ ಅಂಗನವಾಡಿ ಸಿಬ್ಬಂದಿಗೆ ಸಾಕಷ್ಟು ತೊಂದರೆ ಉಂಟಾಗುತ್ತಿದೆ. ಈ ಕುರಿತು ಪಂಚಾಯತಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ನೀಡಿದರು ಯಾವುದೇ ಕ್ರಮವಾಗಿಲ್ಲ. ಅಲ್ಲದೆ ಕಳೆದ ಹನ್ನೆಂದು ವರ್ಷಗಳಿಂದ ಮಕ್ಕಳು ಖಾಸಿಗಿ ಕಟ್ಟಡಗಳಲ್ಲಿಯೇ ಕಲಿಯಬೇಕಾಗಿದೆ. ವರ್ಷಕೊಂದು ಕಟ್ಟಡ ಬದಲಾವಣೆ ಮಾಡಲಾಗುತ್ತಿದೆ. ಒಂದು ಚಿಕ್ಕ ಅಂಗನವಾಡಿಗೆ ಶ್ವಶ್ವತ ಕಟ್ಟಡ ನಿರ್ಮಿಸಲು ಪಂಚಾಯತಿಗೆ ಆಗುತ್ತಿಲ್ಲ, ಇದೂ ಅವರ ನಿರ್ಲಕ್ಷ್ಯ ಎತ್ತಿ ತೋರಿಸುತ್ತಿದೆ.‌ ಹಾಗಾಗಿ ಈಗ ನಾವು ಅನಿವಾರ್ಯವಾಗಿ ಒ್ರತಿಭಟನೆ ಮಾಡಬೇಕಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಕೂಡಲೇ ಪಂಚಾಯತಿ ಅಧಿಕಾರಿ ಹಾಗೂ ಜನಪ್ರತಿನಿಧಿಗಳು 12ನೇ ಅಂಗನವಾಡಿ ಕೇಂದ್ರದ ಮಕ್ಕಳ ಕಲಿಕೆಗೆ ಶಾಶ್ವತ ಅಂಗನಾವಾಡಿ ಕಟ್ಟಡ ನಿರ್ಮಿಸಿಕೊಡಬೇಕು ಇಲ್ಲವಾದಲ್ಲಿ, ಮತ್ತೆ ನಮ್ಮ ಹೋರಾಟವನ್ನು ತ್ರೀವ್ರಗೊಳಿಸಬೇಕಾಗುತ್ತದೆ ಎಂದು ಪಂಚಾಯತಿ ಪಿಡಿಓ, ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು

Share News

About admin

Check Also

ಬೆಲೆ ಏರಿಕೆ ಕುರಿತು ಸಿಹಿ ಸುದ್ದಿ ನೀಡಿದ ಸಿಎಂ

ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್, ಹಾಲಿನ ದರ ಏರಿಕೆ ಮಾಡಲು ಚಿಂತನೆ ನಡೆದಿತ್ತು. ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿದಂತೆ …

Leave a Reply

Your email address will not be published. Required fields are marked *

You cannot copy content of this page