Breaking News

ಕೆಸಿಡಿ ಕಾಲೇಜು ಗಾರ್ಡನ್​​​ನಲ್ಲಿ 2 ಗುಂಪುಗಳ ನಡುವೆ ಮರಾಮಾರಿ

ಧಾರವಾಡ: ಕಳೆದ ಎರಡು ದಿನಗಳ ಹಿಂದೆ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಮಾರಾಮಾರಿ ಘಟನೆ ಮಾಸುವ ಮುನ್ನವೇ ಕರ್ನಾಟಕ ಕಾಲೇಜಿನ ಮುಂಭಾಗದಲ್ಲಿರುವ ಗಾರ್ಡನ್​​​ನಲ್ಲಿ ಎರಡು ಗುಂಪಿನ ಯುವಕರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.‌‌

ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಯುವಕರ ಬೀದಿ ಕಾಳಗ ಮುಂದುವರಿದಿದ್ದು, ವಿವಿಧ ಕಾಲೇಜಿನ ವಿದ್ಯಾರ್ಥಿಗಳಾಗಿರಬಹುದು ಎಂದು ಅಂದಾಜಿಸಲಾಗಿದೆ. ಹೊಡೆದಾಟ ನಡೆಯುತ್ತಿದ್ದ ವೇಳೆ ಮಾಧ್ಯಮದ ಕ್ಯಾಮೆರಾ ನೋಡಿದ ಯುವಕರು ಓಡಿ ಹೋಗಿದ್ದಾರೆ. ಸದ್ಯ ಧಾರವಾಡದಲ್ಲಿ‌ ಪುಂಡ ರೌಡಿಗಳ ಹಾವಳಿ ಹೆಚ್ಚಾಯ್ತಾ? ಎಂಬ ಪ್ರಶ್ನೆ ಉದ್ಭವಿಸಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಯಾವ ರೀತಿ ಕ್ರಮ ಕೈಗೊಳ್ಳಲಿದೆ ಎಂಬುದನ್ನ ಕಾದು ನೋಡಬೇಕಿದೆ

Share News

About admin

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *