Breaking News

ಮದುವೆ ಆಗುವುದಾಗಿ ನಂಬಿಸಿ ವಂಚನೆ- ಸಿಸಿಎಫ್ ಮೇಲೆ ದೂರು

ಧಾರವಾಡ: ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದ ಸಿಸಿಎಫ್ ಅಧಿಕಾರಿಯೊಬ್ಬರ ಮೇಲೆ ಮಹಿಳೆಯೊಬ್ಬಳು ದೂರು ದಾಖಲಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ.

ವಿದ್ಯಾ ಹಿರೇಮಠ ದೂರು ದಾಖಲಿಸಿದ ಮಹಿಳೆ. ಧಾರವಾಡದಲ್ಲಿ ಚಿಫ್ ಕನ್ಸರ್ವೆಟಿವ್ ಫಾರೆಸ್ಟರ್ ಆಗಿದ್ದ ರವಿ ಶಂಕರ ಅವರು ವಿದ್ಯಾ ಅವರಿಗೆ ಫೆಸ್ ಬುಕ್ ನಲ್ಲಿ ಪರಿಚಯವಾಗಿದ್ದರು. ಸದ್ಯ ರವಿಶಂಕರ ಶಿವಮೊಗ್ಗದಲ್ಲಿ ಸಿಸಿಎಫ್ ಆಗಿದ್ದಾರೆ.

ರವಿಶಂಕರ್ ಅವರು ಮದುವೆ ಮಾಡಿಕೊಳ್ಳುವುದಾಗಿ ವಿದ್ಯಾಳನ್ನು ನಂಬಿಸಿ ಮೋಸ ಮಾಡಿದ್ದರು. ಮೋಸ ಮಾಡಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ರವಿಶಂಕರ ಧಮ್ಕಿ ಹಾಕಿದ್ದಾರೆ ಎಂದು ರವಿ ಶಂಕರ್ ವಿರುದ್ಧ ಮಹಿಳೆ ಆರೋಪಿಸಿದ್ದಾರೆ. ದೆಹಲಿಯಲ್ಲಿ ಮೊದಲು ದೂರು ನೀಡಿದ್ದ ಅವರು, ನಂತರ ಅಲ್ಲಿಂದ ಧಾರವಾಡ ಉಪನಗರ ಠಾಣೆಗೆ ದೂರನ್ನು ಟ್ರಾನ್ಸ್ ಫರ್ ಮಾಡಿಸಿಕೊಂಡಿದ್ದಾರೆ.

Share News

About admin

Check Also

ಇಬ್ಬರ ಜಗಳ ಬಿಡಿಸಲು ಹೋದ ಯುವಕನ ಕತ್ತು ಸೀಳಿ ಭೀಕರ ಕೊಲೆ!

ಮಂಡ್ಯ: ಹಣಕಾಸಿನ ವಿಚಾರವಾಗಿ ನಡೆಯುತ್ತಿದ್ದ ಗಲಾಟೆಯನ್ನು ಬಿಡಿಸಲು ಹೋದ 25 ವರ್ಷದ ನಂದನ್ ಎಂಬ ಯುವಕನನ್ನು ಡ್ರ್ಯಾಗರ್‌ನಿಂದ ಕತ್ತು ಸೀಳಿ …

Leave a Reply

Your email address will not be published. Required fields are marked *