ಬೆಂಗಳೂರು: ಪೊಗರು’ ಸಿನಿಮಾ ಬಳಿಕ ನಟ ಧ್ರುವ ಸರ್ಜಾ ಅಭಿನಯಿಸುತ್ತಿರೋ ಸಿನಿಮಾ ‘ಮಾರ್ಟಿನ್’. ನಿರ್ದೇಶಕ ಎ.ಪಿ ಅರ್ಜುನ್ ನಿರ್ದೇಶನದಲ್ಲಿ ಮೂಡಿ ಬರ್ತಿರೋ ಚಿತ್ರಕ್ಕೆ ನಾಯಕಿ ಯಾರಾಗ್ತಾರೆ ಅನ್ನೋದು ಗಾಂಧಿನಗರದಲ್ಲಿ ಚರ್ಚೆ ಆಗಿತ್ತು. ಮತ್ತೊಂದೆಡೆ, ಚಿತ್ರತಂಡ ಹೊಸ ಹೀರೋಯಿನ್ ಹುಡುಕಾಟದಲ್ಲಿದೆ ಎನ್ನಲಾಗಿತ್ತು.

ವೈಭವಿ ಶಾಂಡಿಲ್ಯ ಮೂಲತಃ ಪುಣೆಯವರು. ಈಗಾಗಲೇ ಮರಾಠಿ, ತಮಿಳು ಚಿತ್ರರಂಗದಲ್ಲಿ ಹೆಸರು ಮಾಡಿದ್ದು, ಶರಣ್ ಅಭಿನಯದ ‘ರಾಜ್ ವಿಷ್ಣು’ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಪದಾರ್ಪಣೆ ಮಾಡಿದ್ದರು. ಬಳಿಕ ಯೋಗರಾಜ್ ಭಟ್ ನಿರ್ದೇಶನದ ‘ಗಾಳಿಪಟ 2’ ಸಿನಿಮಾದಲ್ಲಿ ವೈಭವಿ ಅಭಿನಯಿಸಿದ್ದಾರೆ. ಈಗ ಧ್ರುವ ಸರ್ಜಾ ‘ಮಾರ್ಟಿನ್’ ಚಿತ್ರಕ್ಕೆ ನಾಯಕಿ ಆಗಿ ಆಯ್ಕೆಯಾಗಿದ್ದಾರೆ.
ಈಗಾಗಲೇ ಮಾರ್ಟಿನ್ ಸಿನಿಮಾದ ಶೂಟಿಂಗ್ ಅಡ್ಡಕ್ಕೆ ವೈಭವಿ ಆಗಮನವಾಗಿದೆ. ಅದ್ದೂರಿ ಸಿನಿಮಾ ಬಳಿಕ ನಿರ್ದೇಶಕ ಎ.ಪಿ.ಅರ್ಜುನ್ ಮತ್ತು ಧ್ರುವ ಸರ್ಜಾ ಒಂದಾಗುತ್ತಿರುವ ಎರಡನೇ ಚಿತ್ರ ಇದಾಗಿದೆ. ಮತ್ತೊಂದು ಹಿಟ್ ಕೊಡುವುದಕ್ಕೆ ಇವರಿಬ್ಬರು ಪಣತೊಟ್ಟಿದ್ದು, ಇವರಿಬ್ಬರ ಕಾಂಬಿನೇಷನ್ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಬೃಹತ್ ವೆಚ್ಚದಲ್ಲಿ ನಿರ್ಮಾಪಕ ಉದಯ್ ಕೆ. ಮೆಹ್ತಾ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

