Breaking News

“ಸಶಕ್ತ ಮಹಿಳೆ ಸಶಕ್ತಿ ಸಮಾಜ”ಸಂದೇಶದ ಗುಲಾಬಿ ಗಾಣ ಎಣ್ಣೇ ಘಟಕ ಉದ್ಘಾಟನೆ

ಹುಬ್ಬಳ್ಳಿ: ಇನ್ನರವೀಲ್ ಕ್ಲಬ್ ಆಫ್ ಹುಬ್ಬಳ್ಳಿ ಸಿಟಿ ವತಿಯಿಂದ ಇತ್ತೀಚಿಗೆ ಗೋಕುಲ ಗ್ರಾಮದಲ್ಲಿ ಗುಲಾಬಿ ಗಾಣದ ಎಣ್ಣೆ ಘಟಕವನ್ನು ಕ್ಲಬ್‌ನ ರಾಷ್ಟ್ರೀಯ ಅಧ್ಯಕ್ಷ ಸರೋಜ ಕಟಿಯಾರ್ ಉದ್ಘಾಟಿಸಿದರು.


ಇನ್ನರವೀಲ್ ಕ್ಲಬ್ ಹುಬ್ಬಳ್ಳಿ ಸಿಟಿ ಅಧ್ಯಕ್ಷೆ ಅಂಜಲಿ ಕುಲಕಣಿರ ಅವರ ನೇತೃತ್ವದಲ್ಲಿ ಮಹಿಳೆಯರ ಸಬಲೀಕರಣದ ದ್ಯೂತ್ಯಕವಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಅದರ ಒಂದು ಭಾಗವಾಗಿ ಗುಲಾಬಿ ಗಾಣದ ಎಣ್ಣೆ ಘಟಕವನ್ನು ತೆರೆಯಲಾಯಿತು. ಈ ಘಟಕನ್ನು ಸರೋಜ ಕಟಿಯಾರ್ ಅವರು ಸ್ಥಳೀಯ ಗೋಕುಲ ಗ್ರಾ,ಮದ ನಿವಾಸಿ ಸುವರ್ಣಾ ಹೊಸಮನಿ ಅವರಿಗೆ ಹಸ್ತಾಂತರಿಸಿದರು.
ಇದೇ ಸಂದರ್ಭದಲ್ಲಿ ಗೋಕುಲ ಗ್ರಾಮದ ಧಾರಾವತಿ ಹನುಮಾನ ಮಂದಿರದ ಆವರಣ ಗೋಡೆ ಮೇಲೆ ಸುಂದರವಾಗಿ “ಸಶಕ್ತ ಮಹಿಳೆ ಸಶಕ್ತಿ ಸಮಾಜ” ಎಂಬ ಸಂದೇಶ ಸಾರುವ ಬಿಡಿಸಿದ ಚಿತ್ರವನ್ನೂ ಉದ್ಘಾಟಿಸಲಾಯಿತು. ಇದರೊಂದಿಗೆ ದೇವಸ್ಥಾನಕ್ಕೆ ಬರುವ ಭಕ್ತಾಧಿಗಳಿಗಾಗಿ ಕುಳಿತುಕೊಳ್ಳಲು ದೇವಸ್ಥಾನದ ಆವರಣದಲ್ಲಿ ಹದಿನೈದು ಬೆಂಚ್‌ಗಳನ್ನು ನೀಡಲಾಗಿದ್ದು ಅಲ್ಲಿಯ ಗೋ ಶಾಲೆಯ ಅಭಿವೃದ್ಧಿ ಕಾರ್ಯವನ್ನೂ ಕೈಗೆತ್ತಿಕೊಳ್ಳಲಾಗಿದೆ. ಸುಮಾರು 100ಕ್ಕೂ ಹೆಚ್ಚು ಔಷಧೀಯ ಹಾಗೂ ಹಣ್ಣಿನ ಸಸಿಗಳನ್ನು ದೇವಸ್ಥಾನಕ್ಕೆ ನೀಡಲಾಯಿತು ಎಂದು ಅಧ್ಯಕ್ಷೆ ಅಂಜಲಿ ಕುಲಕರ್ಣಿ ತಿಳಿಸಿದರು.
ಈ ಸಂದರ್ಭದಲ್ಲಿ ಕ್ಲಬ್‌ನ ಪದಾಧಿಕಾರಿಗಳಾದ ರತ್ನ ಬೆಹರ್, ರುಕ್ಸಾನ್ ಕಿತ್ತೂರ, ಜ್ಯೋತಿ ಮಡಿಮನ್, ಲತಾ ಜಮಖಂಡಿ, ರಾಧಿಕಾ ಗೋಖಲೆ, ನಿರ್ಮಲಾ ಲಾರೆನ್, ಸುಮಾ ತಾರಾಮತಿ, ರಂಜನಾ, ರತ್ನಾ, ಸುಹಾಸಿನಿ, ಜ್ಯೋತ್ಸಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Share News

About admin

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *