ಟಿಕ್ ಟಾಕ್' ನಿಷೇಧಿಸಿ ಎಂದು ಮದ್ರಾಸ್ ಹೈಕೋರ್ಟ್ ಕೇಂದ್ರಕ್ಕೆ ತಾಕೀತು

ನವದೆಹಲಿ: ಜನಪ್ರಿಯ ಚೀನೀ ವೀಡಿಯೊ ಅಪ್ಲಿಕೇಶನ್ ಟಿಕ್ ಟಾಕ್ ನ್ನು ನಿಷೇಧಿಸಲು ಮದ್ರಾಸ್ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ತಾಕೀತು ಮಾಡಿದೆ.ಈ ವೀಡಿಯೊ ಅಪ್ಲಿಕೇಶನ್ ಅಶ್ಲೀಲತೆಯನ್ನು ಉತ್ತೇಜಿಸುತ್ತಿರುವ ಹಿನ್ನಲೆಯಲ್ಲಿ ಇದನ್ನು ನಿಷೇಧಿಸಬೇಕೆಂದು ಅದು ಕೇಳಿಕೊಂಡಿದೆ ಎಂದು ಹೇಳಿದೆ.ಈ ಆಪ್ ಮೂಲಕ ರಚಿಸಿದ ವಿಡಿಯೋಗಳನ್ನು ಮಾಧ್ಯಮಗಳು ಪ್ರಸಾರ ಮಾಡುವುದನ್ನು ಕೂಡ ನಿಲ್ಲಿಸಬೇಕೆಂದು ಕೋರ್ಟ್ ಹೇಳಿದೆ.ಭಾರತದಲ್ಲಿ ಸುಮಾರು 54 ಮಿಲಿಯನ್ ಜನರು ಟಿಕ್ ಟಾಕ್ ಅಪ್ಲಿಕೇಶನ್ ಬಳಸುತ್ತಿದ್ದಾರೆ.ಈ ಆಪ್ ಬಳಕೆದಾರರಿಗೆ ವಿಶೇಷ ಎಫೆಕ್ಟ್ ಗಳೊಂದಿಗೆ ಕಿರು ವೀಡಿಯೊಗಳನ್ನು ರಚಿಸಲು ಮತ್ತು ಹಂಚಿಕೊಳ್ಳಲು ಇದನ್ನು ಬಳಸಬಹುದಾಗಿದೆ.ಬುಧವಾರದಂದು ಮದ್ರಾಸ್ ಹೈಕೋರ್ಟ್ ಮಧುರೈ ಪೀಠದಲ್ಲಿ ಈ ಕುರಿತಾದ ಅರ್ಜಿಯನ್ನು ಸ್ವೀಕರಿಸಿ ವಿಚಾರಣೆ ನಡೆಸಿದ ಕೋರ್ಟ್ ಟಿಕ್ಟಾಕ್ ಬಳಕೆಯಿಂದಾಗಿ ಮಕ್ಕಳು ಅಶ್ಲೀಲತೆ ತೆರೆದುಕೊಳ್ಳುತ್ತಾರೆ ಎಂದು ಹೇಳಿತು. ಮಧುರೈ ಮೂಲದ ಹಿರಿಯ ವಕೀಲ ಹಾಗೂ ಸಾಮಾಜಿಕ ಕಾರ್ಯಕರ್ತ ಮುತ್ತುಕುಮಾರ್ ಅವರು ಅವರು ಅರ್ಜಿಯನ್ನು ಸಲ್ಲಿಸಿ ಅಶ್ಲೀಲತೆ, ಸಾಂಸ್ಕೃತಿಕ ಅವನತಿ, ಮಕ್ಕಳ ದುರುಪಯೋಗ, ಆತ್ಮಹತ್ಯೆಗಳನ್ನು ಉಲ್ಲೇಖಿಸಿ ಟಿಕ್ಟಾಕ್ ಮೇಲೆ ನಿಷೇಧವನ್ನು ಹೇರಲು ಅವರು ನ್ಯಾಯಾಲಯಕ್ಕೆ ಮೊರೆಹೋಗಿದ್ದರು.

Share News

About Shaikh BIG TV NEWS, Hubballi

Check Also

ರಾಜ್ಯದಲ್ಲಿ ಇಂದು ರಾತ್ರಿ 8 ರಿಂದ ನೈಟ್ ಕರ್ಫ್ಯೂ ಜಾರಿ

ರಾಜ್ಯದಲ್ಲಿ ಕೊರೋನಾ ಹಾಗೂ ಒಮಿಕ್ರಾನ್ ಹಾವಳಿ ಹೆಚ್ಚಾಗುತ್ತಿದ್ದು, ಇಂದು ರಾತ್ರಿ 8 ಗಂಟೆಯಿಂದ ವೀಕೆಂಡ್ ಕರ್ಫ್ಯೂ ಜಾರಿಯಾಗಲಿದೆ. ರಾತ್ರಿ 8 …

Leave a Reply

Your email address will not be published. Required fields are marked *

You cannot copy content of this page