Breaking News

ಮೇಲ್ಮನೆಯಲ್ಲಿ ಮಾದಕ ದ್ರವ್ಯಗಳ ತಿದ್ದುಪಡಿ ವಿಧೇಯಕ ಮಂಡನೆ

ನವದೆಹಲಿ,:ಲೋಕಸಭೆಯಲ್ಲಿ ಸೋಮವಾರ ಅಂಗೀಕಾರಗೊಂಡ ನಾರ್ಕೋಟಿಕ್ ಡ್ರಗ್ಸ್ ಆಯಂಡ್ ಸೈಕೋಟ್ರೋಪಿಕ್ ಸಬ್‍ಸ್ಟ್ರಾನ್ಸಸ್ (ತಿದ್ದುಪಡಿ) ವಿಧೇಯಕ 2021 ಇಂದು ರಾಜ್ಯಸಭೆಯ ಮುಂದೆ ಪರಿಗಣನೆ ಮತ್ತು ಅನುಮೋದನೆಗಾಗಿ ಬರಲಿದೆ. ಮೇಲ್ಮನೆ ಕಲಾಪದ ದ್ವಿತೀಯಾರ್ಧದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ವಿಧೇಯಕವನ್ನು ಮಂಡಿಸುವ ಸಾಧ್ಯತೆ ಇದೆ.

ಪಿ ಆರ್‌ ಎಸ್‌. ಶಾಸಕಾಂಗ ಸಂಶೋಧನೆ ಪ್ರಕಾರ ಈ ಮಸೂದೆಯು ನಾರ್ಕೋಟಿಕ್ ಡ್ರಗ್ಸ್ ಆಯಂಡ್ ಸೈಕೋಟ್ರೋಪಿಕ್ ಸಬ್‍ಸ್ಟ್ಯಾನ್ಸಸ್ ಕಾಯ್ದೆ 1985ಕ್ಕೆ ತಿದ್ದುಪಡಿ ತರಲಿದೆ. ಆ ಕಾಯ್ದೆಯ ಒಂದು ಪ್ರಮಾದವನ್ನು ಸರಿಸಪಡಿಸಿ ಈ ಹೊಸ ಶಾಸನ ರೂಪಿಸಲಾಗಿದೆ.

ಈ ಕಾಯ್ದೆಯು ಮಾದಕ ದ್ರವ್ಯ ನಿಯಂತ್ರಣಕ್ಕೆ ಸಂಬಂಸಿದ (ಉತ್ಪಾದನೆ, ಸಾಗಾಟ ಮತ್ತು ಬಳಕೆಯಂತಹ) ಹಲವಾರು ಕಾರ್ಯಾಚರಣೆಗಳನ್ನು ನಿರ್ಬಂಸುತ್ತದೆ.

2014ರಲ್ಲಿ ಈ ಕಾಯ್ದೆಗೆ ತಿದ್ದುಪಡಿ ತಂದಿದ್ದು, ಇಂಥ ಅಕ್ರಮ ಚಟುವಟಿಕೆಗಳ ಉಪವಾಕ್ಯದ ಸಂಖ್ಯೆಯನ್ನು ಬದಲಾಯಿಸಲಾಗಿತ್ತು. ಹೀಗಿದ್ದರೂ ಈ ಅಕ್ರಮ ಚಟುವಟಿಕೆಗಳಿಗೆ ಹಣಕಾಸು ನೆರವಿಗೆ ವಿಸುವ ದಂಡದ ಪ್ರಮಾಣ ಬದಲಾಯಿಸಿರಲಿಲ್ಲ ಮತ್ತು ಈ ಹಿಂದಿನ ಉಪವಾಕ್ಯದ ಸಂಖ್ಯೆಯೇ ಮುಂದುವರಿದಿತ್ತು. ಇದರಿಂದ ಶಿಕ್ಷೆ ನೀಡಿಕೆ ಕಾರ್ಯಾನುಸಾರಿಯಾಗಿರಲಿಲ್ಲ. ಈಗಿನ ವಿಧೇಯಕವು ಜಲ್ಮಾನೆಯ ಕಲಂ ಅನ್ನು ಬದಲಿಸಿ ಹೊಸ ಉಪವಾಕ್ಯವನ್ನು ರಚಿಸಿದೆ.

Share News

About admin

Check Also

ಗೃಹಪ್ರವೇಶದ ನಂತರ ಬೆಂಗಳೂರು ಟೆಕ್ಕಿಗೆ ಕಾದಿತ್ತು ಶಾಕ್: 12 ಲಕ್ಷ ಮೌಲ್ಯದ ಚಿನ್ನ ಕದ್ದ ಕಳ್ಳರು, FIRಗೂ ಅಲೆದಾಟ

ಬೆಂಗಳೂರು: ಹೊಸ ಮನೆಯ ಗೃಹಪ್ರವೇಶದ ಸಂಭ್ರಮದಲ್ಲಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಕುಟುಂಬದ 80 ಗ್ರಾಂ ಚಿನ್ನಾಭರಣ ಕಳವಾಗಿದ್ದು, ಮೌಲ್ಯ ಸುಮಾರು ₹12 …

Leave a Reply

Your email address will not be published. Required fields are marked *