Breaking News

ಕನಕಪುರ: ಪತ್ರ ಬರೆದು ಮನೆ ಬಿಟ್ಟು ಹೋದ ವಿದ್ಯಾರ್ಥಿ!

ವಿದ್ಯಾರ್ಥಿಯೊಬ್ಬ ‘ತಾನು ಎಂಟು ವರ್ಷಗಳ ನಂತರ ಮನೆಗೆ ಬರುತ್ತೇನೆ’ ಎಂದು ಪತ್ರ ಬರೆದಿಟ್ಟು ಮನೆ ಬಿಟ್ಟು ಹೋಗಿರುವ ಘಟನೆ ನಗರದಲ್ಲಿ ನಡೆದಿದೆ.ಶಾಲೆಗೆ ರಜೆ ಇರುವುದರಿಂದ ಮನೆಯಲ್ಲೇ ಇದ್ದ ಬಾಲಕ, ‘ಎಂಟು ವರ್ಷಗಳ ನಂತರ ನಾನೇ ಮನೆಗೆ ಬರುತ್ತೇನೆ. ನನ್ನನ್ನು ಹುಡುಕಬೇಡಿ. ನೀವು ಹುಡುಕುವ ಪ್ರಯತ್ನ ಮಾಡಿದರೆ ನಾನು ಸತ್ತ ಹಾಗೆ ಎಂದು ಭಾವಿಸಿ ಎಂದು ಪತ್ರ ಬರೆದಿಟ್ಟು ಬುಧವಾರ ಮನೆ ಬಿಟ್ಟು ಹೋಗಿದ್ದಾನೆ.ಮಗನನ್ನು ಹುಡುಕಿಕೊಡಿ ಎಂದು ಬಾಲಕನ ತಂದೆ ಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.ನಗರದ ದಾಳೇಗೌಡ ಅವರ ಮಗ ತೇಜಸ್ (14) ಮನೆ ಬಿಟ್ಟು ಹೋದ ಬಾಲಕ.

Share News

About BigTv News

Check Also

ಚಿಕ್ಕಬಳ್ಳಾಪುರ : ಮಾತನಾಡೋಕೆ ಅಂತ ಬಂದು ಹಿರಿಯ ವಕೀಲನ ಕತ್ತು ಸೀಳಿ ಕೊಲೆಗೆ ಯತ್ನ : ಆರೋಪಿ ಎಸ್ಕೇಪ್!

ಚಿಕ್ಕಬಳ್ಳಾಪುರ: ಗೌರಿಬಿದನೂರಿನಲ್ಲಿ ಹಿರಿಯ ವಕೀಲ ಹಾಗೂ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಣ್ಣಕಿ ವೆಂಕಟರಮಣಪ್ಪ ಅವರ ಕತ್ತು ಕೊಯ್ದು ಕೊಲೆಗೆ …

Leave a Reply

Your email address will not be published. Required fields are marked *