Breaking News

ಧಾರವಾಡದಲ್ಲಿ ಮೊಟ್ಟೆ ಹಿಡಿದು ಪ್ರತಿಭಟನೆ: ಮೊಟ್ಟೆ ವಿರೋಧಿಗಳ ವಿರುದ್ಧ ಧಿಕ್ಕಾರ ಕೂಗಿ ದಲಿತ ಸಂಘಟನೆಗಳ ಆಕ್ರೋಶ .

ಧಾರವಾಡ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ವಿತರಣೆ ಮಾಡುತ್ತಿರುವ ಮೊಟ್ಟೆ ನೀಡುವ ಯೋಜನೆಯನ್ನು ಮುಂದುವರೆಸಬೇಕು‌ ಎಂದು ಅಗ್ರಹಿಸಿ ಹಾಗೂ ಮೊಟ್ಟೆ ವಿರೋಧ ಮಾಡುತ್ತಿರುವುದನ್ನು ಖಂಡಿಸಿ, ಧಾರವಾಡದಲ್ಲಿ ವಿವಿಧ ದಲಿತ ಸಂಘಟನೆಗಳು ಬೀದಿಗೆ ಇಳಿದು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಸಮತಾ ಸೇನೆ ಹಾಗೂ ವಿವಿಧ ದಲಿತ ಸಂಘಟನೆಯ ನೇತೃತ್ವದಲ್ಲಿ, ನಗರದ ನಗರದ ಜನರು ಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ, ಕಾರ್ಯಕರ್ತರು ಮೊಟ್ಟೆ ಹಿಡಿದು ವಿರೋಧಿಗಳ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶವನ್ನು ಹೊರಹಾಕಿದರು.‌

ಮಕ್ಕಳ ಅಪೌಷ್ಟಿಕತೆ ಹೊಗಲಾಡಿಸುವ ಒಳ್ಳೆಯ ಉದ್ದೇಶದಿಂದ ಸರ್ಕಾರಿ ಶಾಲೆಯ ಮಕ್ಕಳಿಗೆ ಮೊಟ್ಟೆಯನ್ನು ನೀಡಲಾಗುತ್ತಿದೆ.‌ ಆದರೆ ಇದರಲ್ಲಿಯು ಕೆಲವು ಸ್ವಾಮೀಜಿಗಳು ಭೇದಭಾವ ಹುಡುಕುವ ಪ್ರಯತ್ನ ಮಾಡುತ್ತಿರುವುದು ಸರಿಯಲ್ಲ. ಮೊಟ್ಟೆ ವಿರೋಧಿಗಳ ಒಮ್ಮೆ ತಮ್ಮನ್ನು ತಾವು ಕೇಳಿಕೊಳ್ಳಬೇಕು.‌ ಮಕ್ಕಳ ದೈಹಿಕ ಬೆಳವಣಿಗೆಗೆ ಮೊಟ್ಟೆಯು ಸಹಕಾರಿಯಾಗಿದೆ. ಹಾಗಾಗಿ‌‌ ಮಕ್ಕಳ ಆರೋಗ್ಯ ದೃಷ್ಠಿಯಿಂದ ರಾಜ್ಯ ಸರ್ಕಾರ ಸರ್ಕಾರಿ ಶಾಲೆಯಲ್ಲಿ ಮೊಟ್ಟೆ ವಿತರಣೆಯನ್ನು ಮುಂದುವರೆಸಬೇಕು ಎಂದು ಅಗ್ರಹಿಸಿದರು.‌

ಒಂದು ವೇಳೆ ಸರ್ಕಾರ ಮಠಾಧೀಶರ ಒತ್ತಡಕ್ಕೆ ಮಣಿದು ಮೊಟ್ಟೆ ವಿತರಣೆ ಕಾರ್ಯವನ್ನು ಸ್ಥಗಿತ ಮಾಡಿದಲ್ಲಿ, ರಾಜ್ಯಾದ್ಯಂತ ಉಗ್ರವಾದ ಹೋರಾಟಕ್ಕೆ ನಾವು ಮುಂದಾಗಬೇಕಾಗುತ್ತದೆ. ಇದೇವೇಳೆ ರಾಜ್ಯ ಸರ್ಕಾರಕ್ಕೆ ನೀಡಿ, ಜಿಲ್ಲಾಧಿಕಾರಿಗಳ ಮೂಲಕ‌ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ‌ ಅವರಿಗೆ ಮನವಿ ಸಲ್ಲಿಸಿದರು. ‌

Share News

About admin

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *