ಬೆಂಗಳೂರು : ಪತ್ನಿ ತವರಿಗೆ ಹೋಗುತ್ತಿದ್ದಂತೆ ಪ್ರೇಯಸಿಯೊಂದಿಗೆ ಪತಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಪತ್ನಿಗೆ ತವರು ಕಳಿಸಿ ಒಂದು ವರ್ಷದಿಂದ ದೇವನಹಳ್ಳಿ ಮನೆಯಲ್ಲಿ ಇದ್ದಾರೆ. ಪತ್ನಿ ವಾಪಸ್ ಬರುತ್ತಿದ್ದಂತೆ ಮನೆಯಿಂದ ತೆರಳುವಂತೆ ತಾಕಿದ್ದು ಮಾಡಿದ್ದಾನೆ. ಆದರೆ ಮನೆಯಿಂದ ತೆರಳದೆ ಮದುವೆಯಾಗುವಂತೆ ಮಹಿಳೆ ನಿರ್ಮಲ ಪಟ್ಟು ಹಿಡಿದಿದ್ದಾಳೆ. ಆಗ ಹಗ್ಗದಿಂದ ಕತ್ತು ಹಿಸುಕಿ ನಿರ್ಮಲಾಳನ್ನು ಕಿಡಿಗೇಡಿ ಮೌನೇಶ್ ಕೊಲೆ ಮಾಡಿದ್ದಾನೆ. ಎರಡು ದಿನ ಬಳಿಕ ಶವವನ್ನು ಚರಂಡಿಗೆ ಎಸೆದು ಬೆಂಕಿ ಹಚ್ಚಿ ಅಲ್ಲಿಂದ ಪರಾರಿಯಾಗಿದ್ದಾನೆ. ಏರ್ಪೋರ್ಟ್ ಸಿಬ್ಬಂದಿ ಮೌನೇಶ್ ಈ ಒಂದು ಕೃತ್ಯ ಎಸಗಿದ್ದಾನೆ. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಹಂತಕ ಮೌನೇಶ್ ಯಾದಗಿರಿಯಲ್ಲಿ ಇರುವುದು ತಿಳಿದು ಬಂದಿದೆ. ತಕ್ಷಣ ಆತನನ್ನು ಅಲ್ಲಿಯೇ ಅರೆಸ್ಟ್ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ ನಿವಾಸಿಯಾಗಿರುವ ಮೌನೇಶ್, ಗುಡಿಬಂಡೆ ಮೂಲದ ನಿರ್ಮಲ ಕೊಲೆಯಾಗಿರುವಂತ ಮಹಿಳೆ. ತನ್ನ ಪತಿ ತವರಿಗೆ ಹೋಗಿದ್ದಾಗ ಈತ ನಿರ್ಮಲ ಎನ್ನುವ ಮತ್ತೊಬ್ಬ ಮಹಿಳೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಯಾವಾಗ ಪತ್ನಿ ಮನೆಗೆ ಬರುತ್ತಾಳೆ ಎನ್ನುವ ವಿಷಯ ತಿಳಿಯಿತು ಆಗ ಮೌನೇಶ್ ನಿರ್ಮಲಾಗೆ ಮನೆಯಿಂದ ಹೋಗುವಂತೆ ಹೇಳಿದ್ದಾನೆ ಆಗ ನಾನು ಮನೆಯಿಂದ ಹೋಗಲ್ಲ ಮದುವೆಯಾಗು ಎಂದಿದಕ್ಕೆ ಮೌನೇಶ್ ನಿರ್ಮಲಾಳನ್ನು ಕೊಲೆ ಮಾಡಿದ್ದಾನೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

