ರೋಣ : ಪಟ್ಟಣದ ಮಾದಿಗ ಮೀಸಲಾತಿ ಹೋರಾಟ ಸಮಿತಿಯವತಿಯಿಂದ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಕೂಡಲೇ ವರ್ಗಾವಣೆ ಮಾಡಬೇಕೆಂದು ತಹಸೀಲ್ದಾರರ ಮುಖಾಂತರ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ಗದಗ ಜಿಲ್ಲಾ ಎಸ್ ಪಿಯವರ ಕಾರ್ಯಾಲಯದಲ್ಲಿ ದಲಿತರ ಕುಂದುಕೊರತೆ ಸಭೆ ಆಯೋಜಿಸಿ ಕುಂದುಕೊರತೆಯ ವಿಷಯದ ಬಗ್ಗೆ ಚೆರ್ಚೆ ಮಾಡುತ್ತಿರುವಾಗ ದಲಿತ ಸಮಾಜದ ಮುಖಂಡರೆಲ್ಲರಿಗೂ ಏರು ಧ್ವನಿಯಲ್ಲಿ ಬೆದರಿಸಿ ಏಕ ವಚನದಲ್ಲಿ ಗದರಿಸಿ ಏ ಸುಮ್ಮನೆ ಕುಳಿತುಕೊಳ್ಳಿ ಎಂದು ತಮ್ಮ ಅಧಿಕಾರದ ಧರ್ಪ ತೋರಿಸಿದ್ದಾರೆ ಎಂದು ಆರೋಪಿಸಿ ರೋಣ ತಹಸೀಲ್ದಾರ್ ಮುಖಾಂತರ ರಾಜ್ಯ ಗೃಹ ಸಚಿವ ಅರಗ ಜನೇಂದ್ರರವರಿಗೆ ಕೂಡಲೇ ಎಸ್ ಪಿ ಯವರನ್ನು ವರ್ಗಾವಣೆ ಮಾಡಬೇಕು ಮಾಡದೇ ಹೋದರೆ ರಾಜ್ಯಾದ್ಯಾಂತ ಉಗ್ರ ಹೋರಾಟ ಮಾಡಲಾಗುವದು ಎಂದು ಮಾದಿಗ ದಂಡೋರ ಜಿಲ್ಲಾ ಅಧ್ಯಕ್ಷ ಪ್ರಕಾಶ ಹೊಸಳ್ಳಿ ಮನವಿ ನೀಡುವ ಮುಖಾಂತರ ತಿಳಿಸಿದರು.
ಈ ಸಂದರ್ಭದಲ್ಲಿ ಸಂಗಪ್ಪ ಹೊಸಮನಿ. ಹನಮಂತಪ್ಪ ಪೂಜಾರ ಹೇಮಂತ ಕಡಿಯವರ, ಹಿರಿಯಪ್ಪ ಹಲಗಿ, ಮುತ್ತಪ್ಪ ಪೂಜಾರ, ಮುತ್ತಪ್ಪ ಜೋಗಣ್ಣವರ, ಬಸವರಾಜ ಹೊಸಳ್ಳಿ, ಫಕೀರಪ್ಪ ತೆಗ್ಗಿನಮನಿ ಇನ್ನೂ ಅನೇಕರು ಭಾಗವಹಿಸಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

