Breaking News

ಧ್ವಜಕ್ಕೆ ಅವಮಾನ ಮಾಡಿದರೇ ದೇಶಕ್ಕೆ ಅವಮಾನ ಮಾಡಿದಂತೆ: ಹಿರಿಯ ನಟ ಮುಖ್ಯಮಂತ್ರಿ ಚಂದ್ರು

ಬೆಂಗಳೂರು: ಬೆಳಗಾವಿಯಲ್ಲಿ ಹೆಚ್ಚುತ್ತಿರುವ ಎಂಇಎಸ್ ಪುಂಡಾಟಿಕೆಯ ಕುರಿತು ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಮಾತನಾಡಿದ್ದಾರೆ. ಕಲಾ ಗಂಗೋತ್ರಿ 50ನೇ ವರ್ಷದ ಪ್ರೇಸ್ ಮೀಟ್ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಚಂದ್ರು ಮರಾಠ ಮಂಡಳಿಯನ್ನು ತಡೆಹಿಡಿಯಬೇಕು.

ಇದೊಂದು ರಾಜಕೀಯ ಪಿತೂರಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರತಿನಿಧಿಗಳು ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದಿದ್ದಾರೆ. ನಾನು ಮರಾಠ ವಿರೋಧಿಯಲ್ಲ. ಆದರೆ ಯಾವುದೇ ಕಾರಣಕ್ಕೂ ಬಾವುಟವನ್ನು ಸುಡುವುದು ಸರಿಯಲ್ಲ.

ನಮ್ಮವರ ಮೇಲೆ ಕೇಸ್ ಹಾಕಿರುವುದನ್ನು ವಾಪಾಸ್ ತೆಗೆದುಕೊಳ್ಳಬೇಕು. ನಾವು ಬಿಡಿ ಬಿಡಿಯಾಗಿ ಹೋರಾಟ ಮಾಡುವ ಬದಲಿಗೆ ಒಗ್ಗಟ್ಟಾಗಿ ಹೋರಾಡಬೇಕು ಎಂದರು. ಇಡೀ ಚಿತ್ರರಂಗ ಬೆಳಗಾವಿಗೆ ತೆರಳಿ ಹೋರಾಟ ನಡೆಸಬೇಕು. ಈ ಮೂಲಕ ಸರ್ಕಾರಕ್ಕೆ ಸೂಚನೆ ನೀಡಬೇಕು. ಸರ್ಕಾರ ಮೀನಾಮೇಷ ಎಣಿಸದೆ ಕನ್ನಡ ಧ್ವಜಕ್ಕೆ ಅವಮಾನ ಮಾಡಿದವರನ್ನು ಬಂಧಿಸಬೇಕು. ಧ್ವಜಕ್ಕೆ ಅವಮಾನ ಮಾಡಿದರೇ ದೇಶಕ್ಕೆ ಅವಮಾನ ಮಾಡಿದಂತೆ ಎಂದು ಸಿಡಿಮಿಡಿಗೊಂಡರು.

Share News

About admin

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *