ಹುಬ್ಬಳ್ಳಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಪ್ರದೀಪ್ ಶೆಟ್ಟರ್ ಅವರು ಅನಿರೀಕ್ಷಿತವಾಗಿ ಇಂದು ಹುಬ್ಬಳ್ಳಿ ಬಿ ಆರ್ ಟಿ ಎಸ್ ಬಸ್ನ ಅನುಕೂಲ ಮತ್ತು ಅನಾನುಕೂಲದ ಬಗ್ಗೆ ಇಂದು ಮಹಾನಗರ ಪಾಲಿಕೆ ಬಿ ಆರ್ ಟಿ ಸಿ ಬಸ್ ನಿಲ್ದಾಣದಿಂದ ರಾಯಪೂರದವರೆಗೆ ಟಿಕೆಟ್ ತೆಗೆದುಕೊಳ್ಳುವ ಮುಖಾಂತರ
ಸಾಮಾನ್ಯ ನಾಗರಿಕ ರು ಹೋಗುವ ಹಾಗೆ ಬಸ್ನಲ್ಲಿ ಪ್ರಯಾಣಿಸಿ ಅವರೊಂದಿಗೆ ಬಿಆರ್ಟಿಎಸ್ ಬಸ್ ಹೇಗಿದೆ ಸ್ವಚ್ಛತೆಯಾಗಲಿ ,ವೇಳೆ ಯ ಬಗ್ಗೆ ಆಗಲಿ ಹೀಗೆಲ್ಲ ಅವರೊಂದಿಗೆ ಮಾತುಕತೆ ಮುಖಾಂತರ ಚರ್ಚೆ ನಡೆಸಿದರು ಇದೇ ಸಂದರ್ಭದಲ್ಲಿ ಪ್ರಯಾಣಿಕರು ಬಸ್ ವ್ಯವಸ್ಥೆ ಚೆನ್ನಾಗಿದ್ದು ಸ್ವಚ್ಛತೆ ಸರಿಯಾಗಿ ಇಲ್ಲ ಮತ್ತು ಮುಂದಿನ ಸ್ಟಾಪ್ ಯಾವುದು ಬರುತ್ತಿದೆ ಅನ್ನುವುದು ನಮಗೆ ಗೊತ್ತಾಗುವುದಿಲ್ಲ

ಡಿಸ್ಪ್ಲೇ ಹೋಗಿದೆ ಹೀಗೆ ತಮ್ಮ ಅನಾನುಕೂಲತೆ ಬಗ್ಗೆ ಕೂಡ ಶಾಸಕರ ಗಮನಕ್ಕೆ ತಂದರು ಮತ್ತು ವಿದ್ಯಾರ್ಥಿಗಳಿಗೆ 100 ನಂಬರ್ ಬಸ್ ಪಾಸ್ ಇಲ್ಲದಿರುವುದರಿಂದ ತೊಂದರೆ ಆಗ್ತಾ ಇದೆ
ನಾವು ಹುಬ್ಬಳ್ಳಿಯಿಂದ ಧಾರವಾಡಕ್ಕೆ ವಿದ್ಯಾರ್ಥಿಗಳು ಹೋಗಬೇಕಾದರೆ ಅದರಲ್ಲಿ ಅನುಕೂಲ ಇಲ್ಲ ಆದ್ದರಿಂದ 100 ನಂ ಅದಕ್ಕೂ ವಿದ್ಯಾರ್ಥಿಗಳ ಪಾಸ್ ಅನುಕೂಲ ಮಾಡಿಕೊಟ್ಟರೆ ನಮಗೆ ಸಮಯದ ಉಳಿತಾಯ ಆಗುತ್ತದೆ ಎಂದು ಹೇಳಿದರು

ನಂತರ ವೀಕ್ಷಣೆ ಮಾಡಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ ಅವರು ಇವತ್ತು ನಾನು ಬಿ ಆರ್ಟಿಎಸ್ ಹೇಗೆ ಇದೆ ಎಂದು ತಿಳಿಯಲಿಕ್ಕೆ ಬಸ್ ನಲ್ಲಿ ಸಂಚಾರ ಮಾಡಿ ಅವರ ತೊಂದರೆಗಳನ್ನು ಪ್ರಯಾಣಿಕರೊಂದಿಗೆ ತಿಳಿದುಕೊಂಡಿದ್ದು
ಇದನ್ನು ಶೀಘ್ರದಲ್ಲಿ ಜಿಲ್ಲಾ ಉಸ್ತುವಾರಿ ರಿವ್ಯೂ ಮೀಟಿಂಗ್ನಲ್ಲಿ ಇದರ ಬಗ್ಗೆ ಗಮನ ಸೆಳೆ ಯುತ್ತೇನೆ ಮತ್ತು ನಾವು ಜನರಿಗೆ ಆದಷ್ಟು ಅನುಕೂಲ ಮಾಡಿಕೊಡಬೇಕು ಮತ್ತು ಅನಾನುಕೂಲತೆ ಬಗ್ಗೆ ಕೂಡ ನಾವು ಒಬ್ಬರೇ ತಿರುಗಾಡಿದಾಗ ಗೊತ್ತಾಗುತ್ತೆ
ಅಂತ ಇಂದು ಭೆಟ್ಟಿ ಮಾಡಿದ್ದೇನೆ ಎಂದು ಹೇಳಿದರು
ಈ ಮೇಲಿನ ವರದಿ ಮತ್ತು ಫೋಟೋ ವಿಡಿಯೋ ತಮ್ಮ ಘನ ಪತ್ರಿಕೆ, ಎಲೆಕ್ಟ್ರಾನಿಕ ಮೀಡಿಯಾದಲ್ಲಿ ಬಿತ್ತರಿಸಬೇಕೆಂದು ಕೇಳಿಕೊಳ್ಳುತ್ತೇನೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





