Breaking News

ಹುಬ್ಬಳ್ಳಿಯಿಂದ ಎರಡು ಎಲೆಕ್ಟ್ರಿಕ್ ರೈಲುಗಳ ಯಶಸ್ವಿ ಸಂಚಾರ

ಹುಬ್ಬಳ್ಳಿ : ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್ ಫಾರಂ ಎಂಬ ಹೆಗ್ಗಳಿಕೆ ಗಳಿಸಿರುವ ಹುಬ್ಬಳ್ಳಿಯ ಶ್ರೀ ಸಿದ್ದಾರೂಢ ರೈಲ್ವೆ ನಿಲ್ದಾಣ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ‌

ಬಹುದಿನಗಳ ನಿರೀಕ್ಷೆಯಲ್ಲಿದ್ದ ಎಲೆಕ್ಟ್ರಿಕಲ್ ರೈಲು ಸಂಚಾರವನ್ನು ಆರಂಭಿಸುವ ಮೂಲಕ‌ ಹೊಸ ಇತಿಹಾಸ ಸೃಷ್ಟಿಯಾಗಿದೆ.
ಹುಬ್ಬಳ್ಳಿಯಿಂದ ಟ್ರೈನ್​​ No 16592 ಮೈಸೂರು-​​​ ಹುಬ್ಬಳ್ಳಿ ಹಂಪಿ ಎಕ್ಸ್‌ಪ್ರೆಸ್‌ ​ಮತ್ತು ಟ್ರೈನ್​​ No 17225 ವಿಜಯವಾಡ -​​​ ಹುಬ್ಬಳ್ಳಿ ಅಮರಾವತಿ ಎಕ್ಸ್‌ಪ್ರೆಸ್‌​ ಎಲೆಕ್ಟ್ರಿಕಲ್ ಎರಡು ರೈಲುಗಳು ಭಾನುವಾರ ಸಂಚರಿಸಿದವು ಎಂದು ಇಲಾಖೆ ತಿಳಿಸಿದೆ.

ಮೈಸೂರು – ಶ್ರೀಸಿದ್ದಾರೂಢ ರೈಲ್ವೆ ನಿಲ್ದಾಣದ ನಡುವೆ ಸಂಚರಿಸುವ ಹಂಪಿ ಎಕ್ಸ್‌ಪ್ರೆಸ್‌ ಹಾಗೂ ವಿಜಯವಾಡ- ಶ್ರೀಸಿದ್ದಾರೂಢ ರೈಲು ನಿಲ್ದಾಣದ ಹುಬ್ಬಳ್ಳಿ ನಡುವೆ ಸಂಚರಿಸುವ ಅಮರಾವತಿ ಎಕ್ಸ್‌ಪ್ರೆಸ್‌ ರೈಲುಗಳು ಯಶಸ್ವಿಯಾಗಿ ಸಂಚರಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿವೆ. ಇದರಿಂದ ಬಹುದಿನಗಳ ‌ಕನಸು ನನಸಾದಂತಾಗಿದೆ.

Share News

About admin

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *