ಧಾರವಾಡ: ರಾಜ್ಯ ಇತರೆ ಐತಿಹಾಸಿಕ ಸ್ಥಳಗಳ ಪುಸ್ತಕ ಸಹ ತರುತ್ತೇವೆ. ಸರಣಿ ಗ್ರಂಥವನ್ನು ತರಲಾಗುವುದು. ರಾಜಕಾರಣಕ್ಕಾಗಿ ಪಾದಯಾತ್ರೆ, ಹೋರಾಟ ಮಾಡುತ್ತಿದ್ದಾರೆ. ಕಾಂಗ್ರೆಸ್ನವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸಮಾಡ್ತಾರೆ. ಇಂಥವರಿಂದ ಪಾಠ ಕಲಿಯಬೇಕಾದ ಅವಶ್ಯಕತೆ ನಮಗಿಲ್ಲ. ಸಿದ್ದರಾಮಯ್ಯ ಹೇಳಿದ್ದಕ್ಕೆಲ್ಲ ನಾನು ಉತ್ತರ ಕೊಡುವುದಿಲ್ಲ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಮಾತನಾಡಿದರು.
ಇತಿಹಾಸ ತಿರುಚುವವರು ಹೆಚ್ಚಾಗಿದ್ದಾರೆ. ನೀವು ಚರಿತ್ರೆ ಒಂದು ಭಾಗ ಆಗಬೇಕು. ಇಲ್ಲದಿದ್ದರೆ ಹೊಸ ಚರಿತ್ರೆ ನಿರ್ಮಾಣ ಮಾಡಬೇಕು. ಇತಿಹಾಸ ಗೊತ್ತಿದ್ದವರು ಮಾತ್ರ ಭವಿಷ್ಯ ಬರೆಯುತ್ತಾರೆ. ಇತ್ತೀಚೆಗೆ ಇತಿಹಾಸ ತಿರುಚುವ ಕೆಲಸ ಬಹಳ ಆಗಿದೆ. ಅನೇಕ ಉದಾಹರಣೆ ನಾ ಕೊಡಬಲ್ಲೆ. ಧಾರವಾಡ ಇತಿಹಾಸ ಹೇಗೆ ತಿರುಚಿದ್ದಾರೆ ಅನ್ನೋದು ನನಗೆ ಗೊತ್ತು. ತಿರುಚುವವರದ್ದೇ ಒಂದು ಇತಿಹಾಸ ಇದೆ. ಸುದೈವವೋ, ದುರ್ದೈವವೋ ಅದು ನನಗೆ ಗೊತ್ತಿದೆ. ಇತ್ತೀಚೆಗೆ ಬೆಳೆಯುತ್ತಿರೋ ಈ ಪ್ರವೃತ್ತಿ ಸರಿಯಲ್ಲ. ಸತ್ಯ, ನಿಷ್ಠುರವಾದ ಇತಿಹಾಸ ಕೊಡುವ ಉಪಕಾರ ಮಾಡಬೇಕಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹುಬ್ಬಳ್ಳಿ-ಧಾರವಾಡ ಸಮಗ್ರ ಅಭಿವೃದ್ಧಿ ಆಗಬೇಕಿದೆ. ಬಜೆಟ್‌ನಲ್ಲಿ ಹೆಚ್ಚಿನ ಪ್ರಾಶಸ್ತ್ಯವನ್ನು ಕೊಡಲಾಗುವುದು. ಬೆಳಗಾವಿ-ಧಾರವಾಡ-ಹುಬ್ಬಳ್ಳಿ ಪ್ರಮುಖ ಪಾತ್ರ ಕೊಡಲಾಗುವುದು. ಚೆನ್ನೈ ಕಾರಿಡಾರ್ನಲ್ಲಿ ಪ್ರಮುಖ ಪಾತ್ರವನ್ನ ವಹಿಸಲಿವೆ. ಮುಂದಿನ ದಿನಗಳಲ್ಲಿ 3 ನಗರ ಪ್ರಮುಖ ಪಾತ್ರ ವಹಿಸಲಿವೆ. ದೊಡ್ಡ ಉದ್ಯಮಗಳು, ಕ್ಲಸ್ಟರ್‌ಗಳು ಈ ಭಾಗದಲ್ಲಿ ಬರಲಿವೆ. ಸಾಕಷ್ಟು ಉದ್ಯೋಗ ಸೃಷ್ಟಿ ಮಾಡಲಾಗುವುದು ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

