Breaking News

ರಾಯಚೂರು ಜಿಲ್ಲೆಯಲ್ಲಿ ಭತ್ತದ ಬೆಳೆಯಲ್ಲಿ ಮೂಡಿದ ಅಪ್ಪು…

ಅಪ್ಪು…. ಈ ಹೆಸರಲ್ಲಿ ಅದೇನೋ ಶಕ್ತಿ ಇದೆ. ಅಪ್ಪು…. ಅಂತ ಕರೆದರೆ ಪ್ರೀತಿ ತೋರಿಸುವ ಮನಸ್ಸಾಗುತ್ತದೆ. ಗಟ್ಟಿಯಾಗಿ ತಬ್ಬಿಕೊಂಡು ನಗು ನಗುತಾ ಮಾತನಾಡುವ ಆಸೆಯಾಗುತ್ತದೆ. ಇದೇ ಈ ಹೆಸರಿನಲ್ಲಿರುವ ತಾಕತ್ತು. ಚಂದನವನದ ಚಂದದ ಗುಡಿ, ದೊಡ್ಮನೆಯ ಕಣ್ಮಣಿ ಪುನೀತ್ ರಾಜಕುಮಾರ್ ಅವರು ಅಗಲಿ ಅಕ್ಟೋಬರ್‌ಗೆ ಎರಡು ವರ್ಷಗಳು ಕಳೆಯುತ್ತವೆ. ಆದರೆ ಅವರ ಮೇಲಿರುವ ಅಭಿಮಾನ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದಂತೆ ಉಳಿದಿದೆ. ಇದಕ್ಕೆ ಸಾಕ್ಷಿ ರಾಯಚೂರು ಜಿಲ್ಲೆಯಲ್ಲಿ ಭತ್ತದ ಬೆಳೆಯಲ್ಲಿ ಮೂಡಿದ ಅಪ್ಪುವಿನ ಚಿತ್ರ.

ಹೌದು… ಅಪ್ಪುವಿನ ಅಪ್ಪಟ ಅಭಿಮಾನಿ ರೈತ ಹಾಗೂ ಕಲಾವಿದರಾದ ಸತ್ಯನಾರಾಯಣ ಅವರು ವಿಭಿನ್ನ ಕಲೆಯ ಮೂಲಕ ಪುನೀತ್ ರಾಜಕುಮಾರ್ ಅವರನ್ನು ಸ್ಮರಿಸಿದ್ದಾರೆ. ಸಿರವಾರ ತಾಲೂಕಿನ ಡೋಣಿ ಬಸವಣ್ಣ ಕ್ಯಾಂಪ್‌ನ ರೈತನಾಗಿರುವ ಅಭಿಮಾನಿ ಸತ್ಯನಾರಾಯಣ ಅವರು ತಮ್ಮ ಭತ್ತದ ಗದ್ದೆಯಲ್ಲಿ ಅಪ್ಪುವಿನ ವಿತ್ರವನ್ನು ಬಿಡಿಸುವ ಮೂಲಕ ಮುನ್ನಲೆಗೆ ಬಂದಿದ್ದಾರೆ.

Share News

About BigTv News

Check Also

ಹುಬ್ಬಳ್ಳಿಯ ಸ್ಪಾಗಳ ಕರಾಳ ಮುಖ..! ಮಸಾಜ್ ಹೆಸರಿನಲ್ಲಿ ಅಕ್ರಮ ದಂಧೆಯ ಶಂಕೆ — ಕಮಿಷನರ್ ಸಾಹೇಬರೇ, ಇತ್ತ ಗಮನ ಹರಿಸಿ!

ಸ್ಪಾಗಳ ಒಳಗೆ ನಡೆಯುತ್ತಿದೆಯಾ ಅಕ್ರಮದ ಆಟ..? ದಂಧೆ ಸಾಬೀತಾದರೆ ಬುಲ್ಡೋಜರ್ ಕ್ರಮ ಬೇಡ, ಕಾನೂನಿನ ಕಠಿಣ ಕ್ರಮವಾಗಲಿ! ಮಸಾಜ್ ಹೆಸರಿನಲ್ಲಿ …

Leave a Reply

Your email address will not be published. Required fields are marked *