ಬೆಂಗಳೂರು: ಸಿದ್ದರಾಮಯ್ಯನವರು ರಾಷ್ಟ್ರ ಹಾಗೂ ರಾಜ್ಯ ನಾಯಕರ ಬಗ್ಗೆ ಹಗುರವಾಗಿ ಮಾತನಾಡುವ ದುರಭ್ಯಾಸ ಬೆಳೆಸಿಕೊಂಡಿದ್ದಾರೆ. ಗಾಂಧಿ ಮನೆತನವನ್ನು, ಸೋನಿಯಾ ಹಾಗೂ ರಾಹುಲ್ ಗಾಂಧಿಯವರನ್ನು ಹೊಗಳುವುದಷ್ಟೇ ತಿಳಿದುಕೊಂಡಿದ್ದಾರೆ ಎಂದು ಕುಡಚಿ ಶಾಸಕ ಪಿ.ರಾಜೀವ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಳಿನ್ ಕುಮಾರ್ ಅವರಿಗೆ ಬುದ್ದಿ ಇಲ್ಲ ಅಂದಿದ್ದಾರೆ. ಆದರೆ ಇವರ ಬಳಿ ಇರುವುದು ಯಾವ ಬುದ್ದಿ? ಒಳ್ಳೆಯ ಬುದ್ದಿ ಕೆಟ್ಟ ಬುದ್ದಿ ಎರಡಿರುತ್ತದೆ. ಸಿದ್ಧರಾಮಯ್ಯ ಹತ್ತಿರ ಯಾವ ಬುದ್ದಿ ಇದೆ? ಬಿಜೆಪಿಯವರಿಗೆ ಬುದ್ದಿ ಹೇಳೊ ಅವಶ್ಯಕತೆ ಇಲ್ಲ. ನಿಮ್ಮ ಪಕ್ಷದ ಅಧ್ಯಕ್ಷರಿಗೆ ಬುದ್ದಿ ಹೇಳಿ ಎಂದು ಕುಟುಕಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

