Breaking News

ವರುಣ ದೇವನಿಗೆ ಪ್ರಾರ್ಥಿಸಿ ಗೊಂಬೆಗಳ ಮದುವೆ


ಹುಮನಾಬಾದ್: ಮಳೆಯ ಸಮೃದ್ಧಿಗಾಗಿ ವರುಣ ದೇವನಿಗೆ ಪ್ರಾರ್ಥಿಸಿ ಸಮೀಪದ ಮೀನಕೇರಾ ಗ್ರಾಮದಲ್ಲಿ  ಗೊಂಬೆಗಳ ಮದುವೆ ಮಾಡಲಾಯಿತು.

ಗ್ರಾಮದಲ್ಲಿ ಮದುವೆಯ ಸಂಭ್ರಮ ಮನೆ ಮಾಡಿತ್ತು. ಸಾಮಾನ್ಯ ಮದುವೆ ಸಮಾರಂಭದಲ್ಲಿ ಮಾಡುವ ಎಲ್ಲಾ ಕೈಂಕರ್ಯಗಳು ಈ ವೇಳೆ ನಡೆದವು.ಓಣಿಯ ಎಲ್ಲರೂ ಸಂಭ್ರಮದಿಂದ ಪಾಲ್ಗೊಂಡಿದ್ದರು. ಗ್ರಾಮಸ್ಥರು ತಮ್ಮ ಮನೆಗಳ ಬಾಗಿಲುಗಳಿಗೆ ತಳೀರು ತೋರಣದಿಂದ ಅಲಂಕಾರ ಮಾಡಿ, ತಮ್ಮ ಮನೆಯ ಸದಸ್ಯರ ಮದುವೆ ಎಂಬಂತೆ ಉತ್ಸಾಹದಿಂದ ಪಾಲ್ಗೊಂಡಿದ್ದರು.

ಮೊದಲಿಗೆ ಗ್ರಾಮದ ರಾಮಲಿಂಗೇಶ್ವರ ಮಂದಿರದಿಂದ ಸಂಪ್ರದಾಯದಂತೆ ಗ್ರಾಮದ ವಿಶ್ವಕರ್ಮರ (ಅಕ್ಕಸಾಲಿಗರ) ಮನೆಗೆ ವಾದ್ಯಮೇಳಗಳೊಂದಿಗೆ ತಾಯಂದಿರು ಸೇರಿ ಸಂಪ್ರದಾಯದಂತೆ ಮಂಗಲಸೂತ್ರ (ತಾಳಿ) ಹಾಗೂ ಬಟ್ಟುಂಗರದ ಪೂಜೆ ಬಳಿಕ ರಾಮಲಿಂಗೇಶ್ವರ ಮಂದಿರದಲ್ಲಿ ಸಂಗಯ್ಯ ಮಠಪತಿ ಅವರಿಂದ ಮದುವೆ ವಿಧಿ ವಿಧಾನಗಳು ಸಡಗರದ ನಡುವೆ ಜರುಗಿತು. ಬಳಿಕ ಗ್ರಾಮದ ಹನುಮಾನ ಮಂದಿರದ ವರೆಗೆ ನವ ವಧು ವರ ಗೊಂಬೆಗಳ ಮೆರವಣಿಗೆ ನಡೆಯಿತು.

Share News

About BigTv News

Check Also

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಅಪಹರಿಸಿ ವ್ಯಕ್ತಿ ಹತ್ಯೆ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಉಲ್ಬಣಗೊಂಡಿದ್ದು ಮೈತೇಯಿ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಶಂಕಿತ ಕುಕಿ ಸಮುದಾಯದ ಬಂಡುಕೋರರು ಅಪಹರಿಸಿ ಗುಂಡಿಕ್ಕಿ ಹತ್ಯೆ …

Leave a Reply

Your email address will not be published. Required fields are marked *