ಈಗಾಗಲೇ ಒಂದು ಹೆಣ್ಣಾಗಿದೆ; ಈಗ ಮತ್ತೆ ಹೆಣ್ಣು ಮಗು ಆದೀತೆಂದು ಆತಂಕಕ್ಕೆ ಈಡಾದ ತುಂಬು ಗರ್ಭಿಣಿಯೊಬ್ಬರು ಡೆಲಿವರಿ ಡೇಟ್ಗೆ ಒಂದು ದಿನ ಮುಂಚೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೌರ್ಭಾಗ್ಯವೆಂದರೆ ಆಕೆ ಹೆಣ್ಣಾಗಬಹುದು ಅಂದುಕೊಂಡಿದ್ದರು. ಆದರೆ ಅದು ಗಂಡು ಮಗು! ಪೋಸ್ಟ್ ಮಾರ್ಟಮ್ ಮಾಡಿದಾಗ ಆಕೆ ಗರ್ಭ ಧರಿಸಿದ್ದು ಗಂಡು ಮಗುವಿಗೆ ಎಂಬ ವಿಷಾದದ ಸಂಗತಿ ಬಯಲಾಗಿದೆ. ಮಂಚಿರ್ಯಾಲ ಜಿಲ್ಲೆಯ ಎನ್ಟಿಆರ್ ನಗರದಲ್ಲಿ ಈ ಘಟನೆ ನಡೆದಿದೆ. ಮಂಚಿರ್ಯಾಲ ಜಿಲ್ಲೆಯ ಎನ್ಟಿಆರ್ ನಗರದಲ್ಲಿ 25 ವರ್ಷದ ರಮ್ಯಾ ಎಂಬಾಕೆಯೇ ಈ ದುಸ್ಸಾಹಸಕ್ಕೆ ಕೈಹಾಕಿದ ಮಹಿಳೆ.
ವೈದ್ಯರು ಗರ್ಭಿಣಿ ರಮ್ಯಾಗೆ ಜನವರಿ 6 ರಂದು ಡೆಲಿವರಿ ಡೇಟ್ ನೀಡಿದ್ದರು. ರಮ್ಯಾಗೆ ಈ ಹಿಂದೆ ಚೊಚ್ಚಲ ಹೆರಿಗೆಯಲ್ಲಿ ಹೆಣ್ಣು ಮಗು ಹೆಣ್ಣಾಗಿತ್ತು. ಈಗ ಮತ್ತೆ ಹೆಣ್ಣು ಮಗುವೇ ಹುಟ್ಟೀತು ಎಂಬ ಭೀತಿಯಿಂದ ಅತ್ತೆ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಮಧ್ಯೆ ಇದೇ ವಿಷಯವಾಗಿ ಅತ್ತೆ ಮನೆಯವರ ಕಾಟದಿಂದಾಗಿ ತಮ್ಮ ಮಗಳು ರಮ್ಯಾ ಪ್ರಾಣ ನೀಗಿದ್ದಾಳೆ ಎಂದು ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

