Welcome to bigtvnews   Click to listen highlighted text! Welcome to bigtvnews
Breaking News

ರೈತರ ಖಾತೆಗೆ ₹6 ಸಾವಿರ..! ಮೋದಿ ಕೊಡುಗೆ..

ನರೇಂದ್ರ ಮೋದಿ ಸರ್ಕಾರದ ಕೊನೆ ಬಜೆಟ್​ನಲ್ಲಿ ರೈತರಿಗೆ ಬಂಪರ್ ಕೊಡುಗೆ ನೀಡಲಾಗಿದೆ. ಬಜೆಟ್​ನಲ್ಲಿ ಹೊಸ ಯೋಜನೆ ಘೋಷಿಸಿರುವ ಕೇಂದ್ರ ಸರ್ಕಾರ ಸಣ್ಣ ಮತ್ತು ಮಧ್ಯಮ ರೈತರ ಖಾತೆಗಳಿಗೆ ವಾರ್ಷಿಕ 6 ಸಾವಿರ ರೂಪಾಯಿ ಜಮಾ ಮಾಡಲಿದೆ. 2018-19ರ ಬಜೆಟ್​ನಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಘೋಷಿಸಿದ ಕೇಂದ್ರ ಪಿಯೂಷ್​ ಗೊಯಲ್ ಈ ಯೋಜನೆ ಮೂಲಕ ಸಣ್ಣ ಹಿಡುವಳಿದಾರರು ಅಂದ್ರೆ 2 ಹೆಕ್ಟೆರ್(5ಎಕರೆ)​ ಒಳಗಡೆ ಭೂಮಿ ಇರೋ ರೈತರ ಖಾತೆಗೆ ಸುಮಾರು 6 ಸಾವಿರ ರೂಪಾಯಿ ಹಾಕಲಾಗುವುದು ಅಂತ 2019-20ರ ಬಜೆಟ್​ನಲ್ಲಿ ಘೋಷಿಸಿದ್ದಾರೆ. ಒಟ್ಟು ಮೂರು ಕಂತುಗಳಲ್ಲಿ ರೈತರಿಗೆ ಹಣ ನೀಡಲಾಗುವುದು, ಇದು 12 ಕೋಟಿ ರೈತರಿಗೆ ಸಹಾಯವಾಗಲಿದೆ. ಡಿಸೆಂಬರ್ 2018 ಪೂರ್ವನ್ವಯ ಆಗುವಂತೆ ಈ ಯೋಜನೆ ಜಾರಿಗೊಳಿಸಲಾಗಿದೆ. ಈ ಡಿಸೆಂಬರ್​ನ 2000 ರೂಪಾಯಿ ಮೊತ್ತವನ್ನ ಈಗಿನಿಂದಲೇ ರೈತರ ಖಾತೆಗೆ ತಲುಪಿಸಲು ಕ್ರಮಕೈಗೊಳ್ಳಲಾಗುವುದು. ಈ ಯೋಜನೆಯ ಸಂಪೂರ್ಣ ವೆಚ್ಚವನ್ನ ಕೇಂದ್ರವೇ ಭರಿಸಲಿದ್ದು. ಬಜೆಟ್​ನಲ್ಲಿ ಇದಕ್ಕಾಗಿ75 ಸಾವಿರ ಕೋಟಿ ರೂಪಾಯಿ ಹೆಚ್ಚುವರಿ ಹೊರೆಯಾಗಲಿದೆ.

Spread the love

About Shaikh BIG TV NEWS, Hubballi

Check Also

ದೆವ್ವ ಬಿಡಿಸ್ತಿನಿ ಅಂತಾ ಈ ಬಾಬಾ ಮಾಡಿದ್ದೇನು-5 ವರ್ಷಗಳಿಂದ ಈ ಫಕೀರ ಮಾಡಿದ್ದು ನೋಡಿ ನಿಮಗೆ ಗೊತ್ತಾಗುತ್ತೆ

ಹೈದರಾಬಾದ್‌: ದೆವ್ವ ಬಿಡಿಸುವ ನೆಪದಲ್ಲಿ ನಕಲಿ ಬಾಬ ಹಾಗೂ ಆತನ ಪುತ್ರ ಮಹಿಳೆ, ಆಕೆಯ ತಂಗಿಯ ಮೇಲೆ 5 ವರ್ಷಗಳಿಂದ ಅತ್ಯಾಚಾರ …

Leave a Reply

Your email address will not be published. Required fields are marked *

You cannot copy content of this page
Click to listen highlighted text!