ಪ್ರಧಾನಿ ಮೋದಿ ಪಂಜಾಬ್ಗೆ ಭೇಟಿ ನೀಡಿದ್ದಾಗ ಭದ್ರತಾ ವೈಫಲ್ಯ ಸಂಭವಿಸಿದ ಎರಡು ದಿನಗಳ ಬಳಿಕ ವಿಡಿಯೋವೊಂದು ಹೊರಬಿದ್ದಿದೆ. ಇದ್ರಲ್ಲಿ ಮತ್ತೊಂದು ರೀತಿಯ ಭದ್ರತಾ ವೈಫಲ್ಯ ನಡೆದಿರೋದು ಬೆಳಕಿಗೆ ಬಂದಿದೆ. ಮೋದಿ ಫ್ಲೈ ಓವರ್ನಲ್ಲಿ ಸ್ಟ್ರಕ್ ಆಗಿದ್ದಾಗ ಪಕ್ಕದ ಮತ್ತೊಂದು ಫ್ಲೈಓವರ್ ಮೇಲೆ ಬಿಜೆಪಿ ಕಾರ್ಯಕತ್ರು ಬಂದಿದ್ದಾರೆ.
ಕೆಲವೇ ಮೀಟರ್ನಷ್ಟು ದೂರದಲ್ಲಿ ನಿಂತು, ಬಿಜೆಪಿ ಬಾವುಟಗಳನ್ನು ಹಿಡಿದು ಪ್ರಧಾನಿ ಮೋದಿ, ಬಿಜೆಪಿ ಜಿಂದಾಬಾದ್ ಅಂತ ಘೋಷಣೆಗಳನ್ನು ಕೂಗಿದ್ದಾರೆ. ನಂತರ ಎಸ್ಪಿಜಿ ಗಾರ್ಡ್ಗಳು ಪ್ರಧಾನಿ ಮೋದಿ ಇದ್ದ ಟೊಯೊಟಾ ಫಾರ್ಚುನರ್ ಕಾರನ್ನು ಸುತ್ತುವರಿದು ಮುಂದೆ ಸಾಗೋದನ್ನು ಇಲ್ಲಿ ಗಮನಿಸಬಹುದಾಗಿದೆ. ಪ್ರಧಾನಿ ಮೋದಿ ಫಿರೋಜ್ಪುರ್ನಲ್ಲಿ ಆಯೋಜಿಸಲಾಗಿದ್ದ ಸಮಾವೇಶಕ್ಕೆ ಹೊರಟಿದ್ರು. ಈ ಕಾರ್ಯಕರ್ತರು ಕೂಡ ಅದೇ ಸಮಾವೇಶಕ್ಕೆ ಹೊರಟಿದ್ರು. ಆದ್ರೆ ಟ್ರಾಫಿಕ್ ಜಾಮ್ನಿಂದಾಗಿ ರಸ್ತೆ ಮಧ್ಯದಲ್ಲಿ ಸಿಲುಕಿದ್ರು. ಈ ವೇಳೆ ಪ್ರಧಾನಿ ಮೋದಿ ಹತ್ತಿರಕ್ಕೆ ಹೋಗಲು ಟ್ರೈ ಮಾಡಿದ್ರು ಅಂತ ಗೊತ್ತಾಗಿದೆ. ಇದು ಕೂಡ ಪಂಜಾಬ್ ಪೊಲೀಸರಿಂದ ಆಗಿರೋ ಮತ್ತೊಂದು ಭದ್ರತಾ ವೈಫಲ್ಯವೇ ಆಗಿದೆ. ಅಂದಹಾಗೆ ಅವತ್ತಿನ ಘಟನೆ ಸಂಬಂಧ ಪಂಜಾಬ್ ಮತ್ತು ಕೇಂದ್ರ ಸರ್ಕಾರಗಳೆರಡೂ ಸಮಿತಿ ರಚಿಸಿ ತನಿಖೆಗೆ ಆದೇಶಿಸಿವೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

