Breaking News

72ನೇ ಸ್ವಾತಂತ್ರ್ಯ ದಿನ: ಕೆಂಪು ಕೋಟೆಯಿಂದ ಪ್ರಧಾನಿ ನರೇಂದ್ರ ಮೋದಿ ಭಾಷಣ

ಇದು ಪ್ರಧಾನಿ ಮೋದಿ ಮಾಡುತ್ತಿರುವ ಐದನೇ ಸ್ವಾತಂತ್ರ್ಯ ದಿನದ ಭಾಷಣ.
ನವದೆಹಲಿ: ದೇಶದ 72ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ದೇಶವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಐತಿಹಾಸಿಕ ಕೆಂಪುಕೋಟೆಯಲ್ಲಿ ಭಾಷಣ ಮಾಡುತ್ತಿದ್ದಾರೆ. ಪ್ರಧಾನಿ ಮೋದಿ ಮಾಡುತ್ತಿರುವ ಐದನೇ ಸ್ವಾತಂತ್ರ್ಯ ದಿನದ ಭಾಷಣ ಇದಾಗಿದೆ.
ಕಳೆದ ನಾಲ್ಕು ವರ್ಷಗಳಿಂದಲೂ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಒಂದಿಲ್ಲೊಂದು ಯೋಜನೆಗಳ ಘೋಷಣೆ ಮೂಲಕ ಭಾಷಣ ಅಂತ್ಯಗೊಳಿಸಿದ್ದಾರೆ. ಈ ಬಾರಿಯೂ ಆಯುಷ್ಮಾನ್ ಭಾರತ, ಸುಕನ್ಯಾ ಸಮೃದ್ಧಿ ಹಾಗೂ ಅಟಲ್ ಪಿಂಚಣಿ ಯೋಜನೆಗಳ ಅಧಿಕೃತ ಘೋಷಣೆ ಸಾಧ್ಯತೆಯಿದೆ. 
2014ರಿಂದ 2017ರವರೆಗಿನ ಭಾಷಣಗಳ ಹೈಲೈಟ್ಸ್
2014ರಲ್ಲಿ ತಮ್ಮ ಚೊಚ್ಚಲ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಪ್ರಧಾನಿ ಮೋದಿ ಜನಧನ್, ಸ್ವಚ್ಛ ಭಾರತ್, ಮೇಕ್ ಇನ್ ಇಂಡಿಯಾ ಯೋಜನೆ ಘೋಷಣೆ. ಯೋಜನಾ ಆಯೋಗದ ಬದಲಿಗೆ ನೀತಿ ಆಯೋಗ ಘೋಷಣೆ ಮಾಡಿದ್ದರು.
2015ರಲ್ಲಿ ಸ್ಟಾರ್ಟ್ ಅಪ್ ಇಂಡಿಯಾ-ಸ್ಟ್ಯಾಂಡ್ ಅಪ್ ಇಂಡಿಯಾ, ಡಿ ಗ್ರೂಪ್ ಹುದ್ದೆಗೆ ನೇರ ಪ್ರವೇಶ, ಗ್ರಾಮೀಣ ಪ್ರದೇಶಗಳ ಸಂಪೂರ್ಣ ವಿದ್ಯುದೀಕರಣ ಹಾಗೂ ಸಮಾನ ಶ್ರೇಣಿ-ಸಮಾನ ಪಿಂಚಣಿ ಯೋಜನೆ ಘೋಷಣೆ
2016ರಲ್ಲಿ ಸರ್ಕಾರದ ಸಾಧನೆ ಹಾಗೂ ವಿದೇಶಾಂಗ ನೀತಿ ಕುರಿತು ವಿವರಣೆ ನೀಡಿದ್ದ ಮೋದಿ, ಗ್ರಾಮೀಣ ರಸ್ತೆ ನಿರ್ಮಾಣ, ಉದ್ಯಮ ಸ್ನೇಹಿ ವಾತಾವರಣ ನಿರ್ಮಾಣ ಮತ್ತು ಛಬಾರ್ ಬಂದರಿನ ಬಗ್ಗೆ ಭಾಷಣದಲ್ಲಿ ಪ್ರಸ್ತಾವ ಮಾಡಿದ್ದರು. 
2017ರಲ್ಲಿ 2022ಕ್ಕೆ ನ್ಯೂ ಇಂಡಿಯಾ ಪರಿಕಲ್ಪನೆ ಅನಾವರಣ.
ಪ್ರಧಾನಿಯವರ ಇಂದಿನ ಭಾಷಣದಿಂದಾಗಿ ಕೆಂಪುಕೋಟೆಯಿಂದ ಐದು ಬಾರಿ ಸ್ವಾತಂತ್ರ್ಯ ದಿನದ ಭಾಷಣ ಮಾಡಿದ ಪ್ರಧಾನಿಗಳ ಪಟ್ಟಿಯಲ್ಲಿ ನರೇಂದ್ರ ಮೋದಿ ಅವರ ಹೆಸರು ಕೂಡ ಸೇರ್ಪಡೆ ಆಗಲಿದ್ದು, ಈ ದಿನದ ಅವರ ಭಾಷಣದ ನೇರ ಪ್ರಸಾರವನ್ನು ಗೂಗಲ್ ಮತ್ತು ಯೂಟ್ಯೂಬ್ ನಲ್ಲಿ ಕೂಡ ವೀಕ್ಷಿಸಬಹುದು.
Share News

About Shaikh BIG TV NEWS, Hubballi

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *