Breaking News

ಕೋವಿಡ್ ಲಸಿಕೆಗೆ ಥ್ಯಾಂಕ್ಸ್ ಹೇಳಿದ ವ್ಯಕ್ತಿಯ ಅದೃಷ್ಟದ ಕಥೆ



ಜಾರ್ಖಂಡ್ : ಕೋಟ್ಯಂತರ ಜನರು ವ್ಯಾಕ್ಸಿನ್​ ಪಡೆದುಕೊಂಡಿದ್ದಾರೆ ಅದರಲ್ಲಿ ಇಲ್ಲಿ ಒಬ್ಬ ವ್ಯಕ್ತಿಗೆ ಅದೃಷ್ಟ ಕುಲಾಯಿಸಿದೆ. ಮೂಕ ನಾದ ವ್ಯಕ್ತಿ ಇದೀಗ ಮಾತಾನಾಡಲು ಪ್ರಾರಂಭಿಸಿದ್ದಾನೆ.

ಕೋವಿಡ್ ವ್ಯಾಕ್ಸಿನ್ , ಕೋವಿಶೀಲ್ಡ್ ಪಡೆದ ನಂತರ ವ್ಯಕ್ತಿಯೋರ್ವನಿಗೆ ಕಳೆದ ಐದು ವರ್ಷಗಳ ನಂತರ ನಿಂತು ಹೋಗಿದ್ದ ಮಾತು ಪುನಃ ಬಂದಿದೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ.

ನಡೆದ ಘಟನೆ ಏನು ….

ಜಾರ್ಖಂಡ್​ ರಾಜ್ಯದ ಬೊಕಾರೊದಲ್ಲಿ ಕೋವಿಡ್​ ಲಸಿಕೆ ಕೋವಿಶೀಲ್ಡ್​ ಪಡೆದ ವಾರದ ನಂತರ ವ್ಯಕ್ತಿಯೋರ್ವನ ದೇಹದಲ್ಲಿ ಹೊಸ ರೀತಿಯ ಬದಲಾವಣೆ ಕಾಣಿಸಿಕೊಂಡಿದೆ. ಆತನ ದೇಹದ ಕೆಲವೊಂದು ಮೂಳೆಗಳು ಕೆಲಸ ಮಾಡಲು ಶುರು ಮಾಡಿವೆ. ಕೆಲವೇ ವಾರಗಳ ಹಿಂದೆ ಅಂಗನವಾಡಿ ಕಾರ್ಯಕರ್ತೆಯೊಬ್ಬರು, ನರ್ಸ್​ ಜೊತೆ ಸೇರಿ 55 ವರ್ಷದ ದುಲರ್​ ಚಂದ್​ ಮುಂಡಾ ಅವರಿಗೆ ಕೋವಿಶೀಲ್ಡ್​​ ವ್ಯಾಕ್ಸಿನ್​ ನೀಡಿದ್ದಾರೆ. ಇದಾದ ಬಳಿಕ ಈ ಎಲ್ಲ ಬದಲಾವಣೆಗಳು ಕಂಡು ಬಂದಿವೆಯಂತೆ.

ಮಾತು ಹೋಗಲು ಕಾರಣ? 

ಸಲ್ಗಡಿ ಗ್ರಾಮದ ದುಲರ್​ಚಂದ್ ಮುಂಡಾ ಐದು ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಇವರು ಚಿಕಿತ್ಸೆಯ ನಂತರ ಗುಣಮುಖರಾಗಿದ್ದರೂ ದೈಹಿಕ ನ್ಯೂನತೆಗಳಿಂದಾಗಿ ಹಾಸಿಗೆ ಹಿಡಿದಿದ್ದರು. ದಿನದಿಂದ ದಿನಕ್ಕೆ ಅವರ ಧ್ವನಿಯೂ ಕ್ಷೀಣಿಸಲು ಶುರುವಾಗಿ ಮಾತನಾಡಲು ತೊದಲುತ್ತಿದ್ದರು.

ಜನವರಿ 4ರಂದು ಇವರಿಗೆ ಕೋವಿಡ್ ಮೊದಲ ಡೋಸ್ ಆಗಿ​ ಕೋವಿಶೀಲ್ಡ್ ಲಸಿಕೆ​​ ನೀಡಲಾಗಿದೆ. ಇದಾದ ಬಳಿಕ ದೇಹದಲ್ಲಿ ಅನೇಕ ರೀತಿಯ ಬದಲಾವಣೆ ಕಾಣಿಸಿಕೊಂಡಿದ್ದು, ಸ್ಪಷ್ಟವಾಗಿ ಮಾತನಾಡುವುದರ ಜೊತೆಗೆ ಆತನ ದೇಹದ ಕೆಲವೊಂದು ಮೂಳೆಗಳು ಕೆಲಸ ಮಾಡುತ್ತಿವೆ ಎಂದು ತಿಳಿದು ಬಂದಿದೆ.

Share News

About admin

Check Also

ಅತ್ಯಾಚಾರ ಎಸೆಗಿದವರ ಮೇಲೆ‌ ಪ್ರತೀಕಾರ – ಅಪಹರಣ ಮಾಡಿ ಸಿಕ್ಕಿಬಿದ್ದ ಆರೋಪಿಗಳು!

ಬೆಂಗಳೂರು: ಮಾರತ್ತಹಳ್ಳಿಯಲ್ಲಿ ಸ್ನೇಹಿತನ ಪ್ರೇಯಸಿಯನ್ನು ಕಾಲ್‌ಗರ್ಲ್ ಎಂದು ತಪ್ಪಾಗಿ ಭಾವಿಸಿ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ, ಪ್ರತೀಕಾರಕ್ಕಾಗಿ ಇಬ್ಬರನ್ನು ಅಪಹರಿಸಿ …

Leave a Reply

Your email address will not be published. Required fields are marked *