Breaking News

ಭಯೋತ್ಪಾದಕರ ನಿಗ್ರಹಕ್ಕೆ ಆಗ್ರಹಿಸಿ ಪ್ರತಿಭಟನಾ ಜಾಥಾ

ರಾಮನಗರ: ರಾಮನಗರದಲ್ಲಿ ಇತ್ತೇಚಿನ ದಿನಗಳಲ್ಲಿ ಉಗ್ರರು ಪತ್ತೆ ಹಿನ್ನಲೆಯಲ್ಲಿ ರಾಮನಗರ ನಾಗರೀಕ ಹಿರತಕ್ಷಣಾ ವೇದಿಕೆ ವತಿಯಿಂದ
ಭಯೋತ್ಪಾದನೆ ತೊಲಗಿಸಿ ರಾಮನಗರ ರಕ್ಷಿಸಿ ಎಂಬ ಅಭಿಯಾನ ಹಾಗೂ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು. ‌
ಭಯೋತ್ಪಾದನೆ ವಿರುದ್ದ ನಗರದ ಹಳೆ ಬಸ್ ನಿಲ್ದಾಣದಿಂದ ಎಸ್ಪಿ ಕಛೇರಿ ವರೆಗೂ ಮೆರವಣಿಗೆ ಜಾಥಾ ನಡೆಸಲಾಯಿತು. ‌
ರಾಮನಗರ ಜಿಲ್ಲೆ ಉಗ್ರರ ಅಡಗುತಾಣ ಆಗುತ್ತಿದೆ.
ಅಕ್ರಮ ಬಾಂಗ್ಲಾ ವಲಸಿಗರನ್ನು ಪತ್ತೆಹಚ್ಚಿ ಹೊರದಬ್ಬಬೇಕು. ಈ ಬಗ್ಗೆ ಜಿಲ್ಲಾಡಳಿತ ಪೋಲಿಸ್ ಇಲಾಖೆ ಎಚ್ಚರವಹಿಸಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.
ಬಳಿಕ‌ ಹಿತರಕ್ಷಣಾ ವೇದಿಕೆ ಕಾರ್ಯಕರ್ತರು
ಮೆರವಣಿಗೆ ಮೂಲಕ ಎಸ್ಪಿ ಕಚೇರಿಗೆ ತೆರಳಿ ಶೀಘ್ರ ಕ್ರಮ ಕೈಗೊಳ್ಳಲು ಮನವಿ ಸಲ್ಲಿಸಿದರು.

Share News

About admin

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *