Breaking News
Featured Video Play Icon

3 ಲಕ್ಷ ಲೀಡ್ ನಿಂದ ಗೆಲ್ತಿನಿ: ಶೆಟ್ಟರ್ ಟಿಕೆಟ್ ತಪ್ಪಿಸುವ ತಂತ್ರ ಮಾಡಿಲ್ಲ ಎಂದ ಕೇಂದ್ರ ಸಚಿವ ಜೋಶಿ..!

ಹುಬ್ಬಳ್ಳಿ: ನಾನು ಮೂರು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇನೆ. ಜಗದೀಶ ಶೆಟ್ಟರ್ ನನಗೆ ಟಿಕೆಟ್ ತಪ್ಪಿಸಲು ತಂತ್ರ ಮಾಡಿದ್ದಾರೆ ಎಂಬುವಂತದ್ದನ್ನು ನಾನು ನಂಬುವುದಿಲ್ಲ ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

ಟಿಕೆಟ್ ಘೋಷಣೆ ಬೆನ್ನಲ್ಲೇ ಹುಬ್ಬಳ್ಳಿಗೆ ಆಗಮಿಸಿದ ವೇಳೆ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಮೋದಿ ಅವರು ದೇಶದ ಅತ್ಯಂತ ಜನಪ್ರೀಯ ನಾಯಕರು. ಇಂದು 72 ಸ್ಥಾನಗಳಿಗೆ ಟಿಕೆಟ್ ಘೋಷಣೆಯಾಗಿದೆ. ಕರ್ನಾಟಕದಲ್ಲಿ 20 ಅಭ್ಯರ್ಥಿಗಳ ಘೋಷಣೆ ಮಾಡಿದೆ. ಅದರಲ್ಲಿ ಧಾರವಾಡಕ್ಕೆ ನನ್ನ ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದಾರೆ. ಮೋದಿ,ಜೆಪಿ ನಡ್ಡಾ ಅವರಿಗೆ ,ಅಮಿತ್ ಶಾ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ದೇಶದಲ್ಲಿ NDA 400 ಸ್ಥಾನ ಗೆಲ್ಲಲಿದೆ. ಇವತ್ತು ಆಯ್ಕೆಯಾದ ಎಲ್ಲ ಅಭ್ಯರ್ಥಿಗಳಿಗೆ ಅಭಿನಂದನೆ. ಮೂರನೇ ಬಾರಿಗೆ ನಾವು ದಾಖಲೆ ವಿಜಯ ಸಾಧಿಸುತ್ತೇವೆ. ಆದಷ್ಟು ಬೇಗ ಮುಂದಿನ ಅಭ್ಯರ್ಥಿ ಘೋಷಣೆ ಆಗಲಿದೆ ಎಂದು ಅವರು ಹೇಳಿದರು.

ಹೊಸ ಮುಖಗಳಿಗೆ ಮಣೆ ಹಾಕಿರೋ ವಿಚಾರವಾಗಿ ಮಾತನಾಡಿದ ಅವರು,‌ಗೆಲುವಿನ ಪ್ರಮಾಣ ನೋಡಿ ಕೆಲ ಕಡೆ ಬದಲಾವಣೆ ಆಗಿದೆ.‌ ಇದು ಸಾಮಾನ್ಯ ಪ್ರತಿಕ್ರಿಯೆ. ರಾಷ್ಟ್ರೀಯ ನಾಯಕರ ತೀರ್ಮಾನ. ಕಟೀಲು ಅವರು ರಾಜ್ಯಾಧ್ಯಕ್ಷರಾಗಿದ್ದರು. ನಾವು ಯಾರನ್ನೂ ಕೈ ಬಿಡಲ್ಲ, ಅವರಿಗೆ ಜವಬ್ದಾರಿ ಕೊಡ್ತೀವಿ ಎಂದ ಅವರು, ಕಾಂತೇಶ್ ಗೆ ಟಿಕೆಟ್ ತಪ್ಪಿರೋ ವಿಚಾರವಾಗಿ ಮಾತನಾಡಿ,‌ ಅದು ರಾಷ್ಟ್ರೀಯ ನಾಯಕರ ತೀರ್ಮಾನ. ಎಲ್ಲಿ ಗೆಲ್ತೀವಿ ಅಲ್ಲಿ ಸ್ಪರ್ಧೆ ಇದ್ದೆ ಇರತ್ತೆ, ಎಲ್ಲವೂ ಸರಿಯಾಗತ್ತೆ. ಪ್ರಜಾಪ್ರಭುತ್ವ ಎಲ್ಲರಿಗೂ ಟಿಕೆಟ್ ಕೇಳೋ ಹಕ್ಕಿದೆ. ಕಾಂಗ್ರೆಸ್ ನಲ್ಲಿ ಅಭ್ಯರ್ಥಿ ಗಳೇ ಇಲ್ಲ. ಸ್ಪರ್ಧೆಗೆ ಉತ್ಸಾಹ ಇಲ್ಲ ಎಂದರು.

ಬಿಜೆಪಿಯಲ್ಲಿ ದೊಡ್ಡ ಪಟ್ಟಿ ಇದೆ. ಯದುವೀರ್ ಅವರನ್ನು ಮನವೊಲಿಸಿದ್ದು ಯಡಿಯೂರಪ್ಪ. ಎಲ್ಲರಿಗೂ ಟಿಕೆಟ್ ಕೇಳೋ ಅಧಿಕಾರ ಇದೆ. ಶೆಟ್ಟರ್ ರು ನನಗೆ ಟಿಕೆಟ್ ತಪ್ಪಿಸೋ ಪ್ರಯತ್ನ ಮಾಡಿಲ್ಲ.‌ನಾನು ಅವರನ್ನ ಟೀಕೆ ಮಾಡಲ್ಲ. ಅಭ್ಯರ್ಥಿ ಯಾರೇ ಆಗಲಿ ನಾನು ಮೂರು ಲಕ್ಷ ಲೀಡ್ ನಿಂದ ಗೆಲ್ತೀನಿ ಎಂದು ಭರವಸೆ ವ್ಯಕ್ತಪಡಿಸಿದರು.

Share News

About Shaikh BigTv

Check Also

ಅಡುಗೆ ಮಾಡುವುದನ್ನ ಕಲಿಬೇಕಮ್ಮ: ಅತ್ತೆ ಬುದ್ಧಿ ಹೇಳಿದ್ದಕ್ಕೆ 18 ವರ್ಷದ ಯುವತಿ ಆತ್ಮಹತ್ಯೆ!

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಯುವಕ- ಯುವತಿಯರಿಗೆ ಬುದ್ಧಿವಾದ ಹೇಳುವಂತಿಲ್ಲ. ವಾರದ ಹಿಂದೆಯಷ್ಟೇ ಮೊಬೈಲ್​ ನೋಡಬೇಡ ಎಂದು ಹೇಳಿದಕ್ಕೆ ಕೋಪಗೊಂಡು ಯುವತಿಯೊಬ್ಬಳು …

Leave a Reply

Your email address will not be published. Required fields are marked *