Breaking News

ವಿಜಯ ಮಲ್ಯಗೆ ಮನೆ ಖಾಲಿ ಮಾಡುವಂತೆ ಹೈಕೋರ್ಟು ಆದೇಶ



ಲಂಡನ್: ಭಾರತದ ಬ್ಯಾಂಕುಗಳಿಗೆ ಸುಮಾರು 9 ಸಾವಿರ ಕೋಟಿ ರೂಪಾಯಿ ಸಾಲ ಕೊಡದೇ ಪರಾರಿಯಾದ ಉದ್ಯಮಿ ವಿಜಯ ಮಲ್ಯ ಅವರನ್ನು ಕುಟುಂಬ ಸಮೇತ ಲಂಡನ್ ನಲ್ಲಿರುವ ಐಷಾರಾಮಿ ಮನೆಯಿಂದ ಹೊರಹಾಕಲು ಸ್ಥಳೀಯ ನ್ಯಾಯಾಲಯ ಆದೇಶಿಸಿದೆ.

ಸ್ವಿಸ್ ಬ್ಯಾಂಕಿನ 200 ಕೋಟಿ ರೂಪಾಯಿ ಸಾಲ ವಸೂಲಿಗೆ ಮನೆಯನ್ನು ಜಪ್ತಿ ಮಾಡಲು ಕೋರ್ಟ್ ಆದೇಶ ನೀಡಿದೆ. ಸಾಲ ಪಾವತಿಸಲು ವಿಫಲವಾದ ಹಿನ್ನೆಲೆಯಲ್ಲಿ ಮಲ್ಯ ಅವರ ಲಂಡನ್ ನಿವಾಸವನ್ನು ವಶಕ್ಕೆ ಪಡೆಯಲು ಸ್ವಿಸ್ ಬ್ಯಾಂಕ್ ಸಲ್ಲಿಸಿದ್ದ ಅರ್ಜಿಯನ್ನು ಬ್ರಿಟನ್ ನ್ಯಾಯಾಲಯ ಮಾನ್ಯಮಾಡಿದೆ.

ಲಂಡನ್ ರೆಜಿಂಟ್ ಪಾರ್ಕ್ ನಲ್ಲಿರುವ ಕಾರ್ನ್ ವಾಲ್ ಟೆರೇಸ್ ಹೆಸರಿನ ಮಲ್ಯ ಅವರ ಐಷಾರಾಮಿ ನಿವಾಸ ಸ್ವಿಸ್ ಬ್ಯಾಂಕ್ ಯುಬಿಎಸ್ ವಶಕ್ಕೆ ಪಡೆಯಲಾಗುವುದು. ಬ್ರಿಟಿಷ್ ವರ್ಜಿನ್ ಐಲ್ಯಾಂಡ್ ನಲ್ಲಿ ಮಲ್ಯ ಕುಟುಂಬದ ಹೆಸರಿನಲ್ಲಿ ರೋಸ್ ಕ್ಯಾಪಿಟಲ್ ಕಂಪನಿ ನೋಂದಣಿಯಾಗಿದೆ. ಈ ಕಂಪನಿ 2012 ರಲ್ಲಿ ಸ್ವಿಸ್ ಬ್ಯಾಂಕ್ ನಿಂದ 200 ಕೋಟಿ ರೂಪಾಯಿ ಸಾಲ ಪಡೆದುಕೊಂಡಿದ್ದು, ಇದಕ್ಕಾಗಿ ಲಂಡನ್ ನಲ್ಲಿರುವ ಐಷಾರಾಮಿ ಮನೆಯನ್ನು ಒತ್ತೆ ಇಡಲಾಗಿತ್ತು. ಆದರೆ, ಸಾಲವನ್ನು ಪಾವತಿಸಿರಲಿಲ್ಲವಾದ ಕಾರಣ ಮನೆ ಜಪ್ತಿಗೆ ಕೋರ್ಟ್ ಆದೇಶ ನೀಡಿದೆ.

Share News

About admin

Check Also

ಇಬ್ಬರ ಜಗಳ ಬಿಡಿಸಲು ಹೋದ ಯುವಕನ ಕತ್ತು ಸೀಳಿ ಭೀಕರ ಕೊಲೆ!

ಮಂಡ್ಯ: ಹಣಕಾಸಿನ ವಿಚಾರವಾಗಿ ನಡೆಯುತ್ತಿದ್ದ ಗಲಾಟೆಯನ್ನು ಬಿಡಿಸಲು ಹೋದ 25 ವರ್ಷದ ನಂದನ್ ಎಂಬ ಯುವಕನನ್ನು ಡ್ರ್ಯಾಗರ್‌ನಿಂದ ಕತ್ತು ಸೀಳಿ …

Leave a Reply

Your email address will not be published. Required fields are marked *