Breaking News

ಪ್ರಧಾನಿ ಮೋದಿಯವರಿಂದಾ ಮಾರ್ಚ್ 11 ರಂದು ಧಾರವಾಡ ಐಐಟಿ ನೂತನ ಕಟ್ಟಡ ಉದ್ಘಾಟನೆ

ಧಾರವಾಡ : ಇಂದು ಮುಮ್ಮಿಗಟ್ಟಿಯ ಐಐಟಿಯ ನೂತನ ಕಟ್ಟಡದ ನಿರ್ಮಾಣ ಹಂತದ ಕಾಮಗಾರಿಯನ್ನು ವೀಕ್ಷಿಸಿ, ಪರಿಶೀಲಿಸಿದ ಸಚಿವ ಪ್ರಲ್ಹಾದ ಜೋಶಿ ಅವರು ಮಾತನಾಡುತ್ತಾ, ಶೀಘ್ರವೇ ಉಳಿದೆಲ್ಲ ಕೆಲಸವನ್ನು ಬೇಗನೆ ಮುಕ್ತಾಯಗೊಳಿಸುವಂತೆ ಐಐಟಿಯ ಕಟ್ಟಡ ನಿರ್ಮಾಣದ ಕಂಪನಿಯ ಸಿಇಓಗೆ ತಿಳಿಸಲಾಗಿದೆ ಎಂದರು. ಮಾ.11 ರಂದು ಮಧ್ಯಾಹ್ನ 3 ಗಂಟೆಗೆ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಐಐಟಿ ಕಟ್ಟಡ ಹಾಗೂ ರಾಜ್ಯದ ಹಾಗೂ ಕೇಂದ್ರದ ಪ್ರಮುಖ ಯೋಜನೆಗಳ ಶಂಕುಸ್ಥಾಪನೆ ಹಾಗೂ ಲೋಕಾರ್ಪಣೆಗೊಳಿಸುವರು. ಹಾಗೂ ಕಾರ್ಯಕ್ರಮಕ್ಕೆ 1 ಲಕ್ಷ ಜನ ಸೇರಲಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಶಾಸಕರಾದ ಅಮೃತ ದೇಸಾಯಿ, ಚಂದ್ರಕಾಂತ ಬೆಲ್ಲದ, ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ತವನಪ್ಪ ಅಷ್ಟಗಿ, ಮಹಾಪೌರ ಈರೇಶ ಅಂಚಟಗೇರಿ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುರೇಶ ಇಟ್ನಾಳ, ಐಐಟಿಯ ನೂತನ ನಿರ್ದೇಶಕರಾದ ಪ್ರೊ: ವೆಂಕಪಯ್ಯ ದೇಸಾಯಿ, ರಜಿಸ್ಟ್ರಾರ್ ಪ್ರೊ. ಬಸವರಾಜಪ್ಪ, ಪ್ರೊ: ಸನತ್ ಕುಮಾರ್ ರಾಜಮಾನೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

Share News

About admin

Check Also

ದಾವಣಗೆರೆಯಲ್ಲಿ ಗಾಂಜಾ ದಂಧೆಗೆ ಖಾಕಿ ಶಾಕ್..! ನಾಲ್ವರು ಅರೆಸ್ಟ್, 2.5 ಕೆಜಿ ಗಾಂಜಾ ಸೀಜ್!

ಗಾಂಜಾ ದಂಧೆಕೋರರಿಗೆ ಆಜಾದ್ ನಗರ ಪೊಲೀಸರ ಬೇಟೆ..! ₹1.25 ಲಕ್ಷದ ಮಾಲು ವಶ, ಎರಡು ಬೈಕ್ ಜಪ್ತಿ! ದಾವಣಗೆರೆಯಲ್ಲಿ ಗಾಂಜಾ …

Leave a Reply

Your email address will not be published. Required fields are marked *