ಬೆಂಗಳೂರು : ರಾಜ್ಯ ಸರ್ಕಾರವು ಸರ್ಕಾರಿ ನೌಕರರಿಗೆ ಮತ್ತೊಂದು ಭರ್ಜರಿ ಸಿಹಿಸುದ್ದಿ ನೀಡಿದ್ದು, ವೆಚ್ಚದ ಮಿತಿ ಇಲ್ಲದೆ 1527 ವೈದ್ಯಕೀಯ ಚಿಕಿತ್ಸೆ/ಶಸ್ತ್ರ ಚಿಕಿತ್ಸೆಗಳ ನಗದು ರಹಿತ ಸೌಲಭ್ಯ ನೀಡುವ ಆರೋಗ್ಯ ಸಿರಿ ಯೋಜನೆ ಶೀಘ್ರವೇ ಜಾರಿಗೆ ಬರಲಿದೆ.
ರಾಜ್ಯ ಸರ್ಕಾರವು ಆರೋಗ್ಯ ಸಿರಿ ಯೋಜನೆ ಜಾರಿಗೆ ತಂದಿದ್ದು, ಈ ಯೋಜನೆ ಮೂಲಕ ನೌಕರರು ಮತ್ತು ಅವಲಂಬಿತ ಕುಟುಂಬಸ್ಥರು ಸೇರಿ ರಾಜ್ಯದ 28 ಲಕ್ಷ ಜನರಿಗೆ ಅನುಕೂಲವಾಗಲಿದೆ. ರಾಜ್ಯದಲ್ಲಿ 5.40 ಲಕ್ಷ ಸರ್ಕಾರಿ ನೌಕರರಿದ್ದಾರೆ. ಆರೋಗ್ಯ ಸಿರಿ ಯೋಜನೆಗಾಗಿ ಪ್ರತಿ ನೌಕರನ ಮೂಲ ವೇತನದ ಶೇ. 1 ರಷ್ಟು ಹಣ ಕಡಿತಗೊಳಿಸಲಾಗುತ್ತದೆ. ಕಡಿತಗೊಂಡ ಮೂಲ ವೇತನವನ್ನು ಮೂರು ಪಟ್ಟು ಹಣವನ್ನು ರಾಜ್ಯ ಸರ್ಕಾರ ಭರಿಸಲಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

