ಬೆಂಗಳೂರು: “ನಾವು ಭೋವಿ ಜನಾಂಗ, ಕಲ್ಲು ಹೊಡೆಯುವ ಸಮಾಜ, ಸದಾ ಎಚ್ಚರವಾಗಿರುತ್ತೇವೆ ಎಂಬುದನ್ನು ಮರೆಯಬೇಡಿ. ಭೋವಿ, ಬಂಜಾರ ಅಲೆಮಾರಿಗಳ ಮೀಸಲಾತಿಗೆ ಕೈ ಹಾಕಿದರೆ ಪರಿಸ್ಥಿತಿ ನೆಟ್ಟಗಿರೊಲ್ಲ”ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಅರವಿಂದ ಲಿಂಬಾವಳಿ ಎಚ್ಚರಿಕೆ ನೀಡಿದ್ದಾರೆ.
ನಗರದ ಅರಮನೆ ಮೈದಾನದಲ್ಲಿಂದು ಕರ್ನಾಟಕ ರಾಜ್ಯ ಮೀಸಲಾತಿ ಒಕ್ಕೂಟದಿಂದ ಆಯೋಜಿಸಿದ್ದ ಸಂವಿಧಾನದ ಸಾಧನೆ ಮತ್ತು ಸವಾಲುಗಳ ಪರಾಮರ್ಶೆಗಾಗಿ ಮೀಸಲಾತಿ ಸಂರಕ್ಷಣಾ ರಾಜ್ಯ ಸಮಾವೇಶದಲ್ಲಿ ನೂತನವಾಗಿ ಆಯ್ಕೆಯಾಗಿರುವ ಶಾಸಕರಿಗೆ ಸನ್ಮಾನ ನೆರವೇರಿಸಿ ಲಿಂಬಾವಳಿ ಮಾತನಾಡಿದರು.
ಸದಾಶಿವ ಆಯೋಗದ ವರದಿಯನ್ನು ಕಳೆದ ಸರ್ಕಾರ ಮುಕ್ತಾಯಗೊಳಿಸಿದೆ. ಪರಿಶಿಷ್ಟರ ಮೀಸಲಾತಿಗೆ ಕೈ ಹಾಕಿ ಹಿಂದಿನ ಸರ್ಕಾರ ನೋವು ಅನುಭವಿಸಿದೆ. ಇದು ಗೊತ್ತಿದ್ದರೂ ಕೂಡ ಇಂದಿನ ಸರ್ಕಾರ ಮತ್ತೆ ಮೀಸಲಾತಿ ವಿಚಾರದಲ್ಲಿ ಕೈ ಹಾಕುತ್ತಿದೆ. ನಮ್ಮ ಸಮಾಜದ ಒಳಿತಿಗೆ ಪೆಟ್ಟು ಬೀಳುವ ಸಂದರ್ಭದಲ್ಲಿ ಹೋರಾಟ ಮಾಡಿಯೇ ತೀರುತ್ತೇವೆ. ಸದಾಶಿವ ಆಯೋಗದ ಬಗ್ಗೆ ಯೋಚನೆ ಮಾಡಿದರೆ ಹಿಂದಿನ ಸರ್ಕಾರಕ್ಕೆ ಕಲಿಸಿದ ಪಾಠ ಮತ್ತೆ ಮರುಕಳಿಸಲಿದೆ” ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





