Breaking News

ಬೆಂಗಳೂರಲ್ಲಿ ಉದ್ಯಮಿಯ ಭೀಕರ ಕೊಲೆ – ಅಂಗಡಿಯೊಳಗೆ ನುಗ್ಗಿ ಕೊಲೆಗೈದ ದುಷ್ಕರ್ಮಿ

ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗೃಹೋಪಯೋಗಿ ವಸ್ತುಗಳ ಮಳಿಗೆ ನಡೆಸುತ್ತಿದ್ದ ರಾಜು ಸಿಂಗ್ ಎಂಬ ಉದ್ಯಮಿಯನ್ನು ಅಂಗಡಿಯೊಳಗೇ ಬರ್ಬರವಾಗಿ ಕೊಲೆ ಮಾಡಲಾಗಿದೆ. ಜೆ.ಪಿ.ನಗರ 7ನೇ ಹಂತದ ಗಂಗಾ ಇಂಡಸ್ಟ್ರೀಸ್‌ನ ಮೊದಲ ಮಹಡಿಯಲ್ಲಿ ರಾತ್ರಿ 7.30ರ ಸುಮಾರಿಗೆ ಘಟನೆ ನಡೆದಿದೆ. ಅಂಗಡಿಯಲ್ಲಿ ರಾಜು ಸಿಂಗ್ ಒಬ್ಬರೇ ಇದ್ದಾಗ ಒಳನುಗ್ಗಿದ ದುಷ್ಕರ್ಮಿ ಮಾರಕಾಸ್ತ್ರದಿಂದ ಅವರ ತಲೆಗೆ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ರಾಜು ಸಿಂಗ್ ಕಳೆದ 30 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು. ಘಟನೆ ಕುರಿತು ರಾಜು ಸಿಂಗ್ ಅವರ ಮಗಳು ನೀಡಿದ ದೂರಿನ ಆಧಾರದ ಮೇಲೆ ಪುಟ್ಟೇನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

Share News

About BigTv News

Check Also

ಗರಗಸದಿಂದ ರುಂಡ-ಮುಂಡ ಬೇರ್ಪಡಿಸಿ, 2 ಚೀಲದಲ್ಲಿ ತುಂಬಿದ ರಾಕ್ಷಸರು : ಪೋಸ್ಟ್ ಮಾರ್ಟಂನಲ್ಲಿ ಬೆಚ್ಚಿ ಬೀಳಿಸುತ್ತೆ ಪ್ರಕಾಶ್ ಕುಂದರ್ ಹತ್ಯೆ!

ಶಾರ್ಜಾದಲ್ಲಿ ಉಡುಪಿ ಮೂಲದ ಆಲ್ವಿನ್ ಪ್ರಕಾಶ್ ಕುಂದರ್ ಎಂಬವರನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ರಸ್ತೆ ಬದಿ ನಿಲ್ಲಿಸಿದ್ದ ಕಾರಿನಲ್ಲಿ ಅವರ …

Leave a Reply

Your email address will not be published. Required fields are marked *