ಘಾನಾ : ಪಶ್ಚಿಮ ಘಾನಾದಲ್ಲಿ ಗಣಿಗಾರಿಕೆ ಸ್ಫೋಟಕಗಳನ್ನು ಸಾಗಿಸುತ್ತಿದ್ದ ಟ್ರಕ್ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದ ಘಟನೆ ಪಶ್ಚಿಮ ಆಫ್ರಿಕಾ ದೇಶದ ರಾಜಧಾನಿ ಅಕ್ರಾದಿಂದ ಪಶ್ಚಿಮಕ್ಕೆ 300 ಕಿ.ಮೀ ದೂರದಲ್ಲಿರುವ ಗಣಿ ನಗರ ಬೊಗೊಸೊ ಬಳಿಯ ಅಪಿಯಾಟೆಯಲ್ಲಿ ಮಧ್ಯಾಹ್ನದ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು, ನಂತರ 17 ಜನರು ಮೃತಪಟ್ಟಿದ್ದಾರೆ.
ಖನಿಜ ಸಮೃದ್ಧ ಪ್ರದೇಶದ ಎರಡು ಚಿನ್ನದ ಗಣಿಗಳ ನಡುವೆ ಪ್ರಯಾಣಿಸುತ್ತಿದ್ದ ಟ್ರಕ್ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದ ನಂತರ ಸ್ಫೋಟ ಸಂಭವಿಸಿದ್ದು, 17 ಜನರು ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಸ್ಫೋಟ ನಡೆದ ಪ್ರೆಸ್ಟೀ ಹುನಿ-ವ್ಯಾಲಿ ಮುನ್ಸಿಪಲ್ ಸರ್ಕಾರದ ಮುಖ್ಯಸ್ಥ ಐಸಾಕ್ ಡಿಸಾಮಾನಿ ಸ್ಥಳೀಯ ಮಾಧ್ಯಮಗಳಿಗೆ ಅಧಿಕಾರಿಗಳು ಇಲ್ಲಿಯವರೆಗೆ ಸುಮಾರು 17 ಮೃತ ದೇಹಗಳು ಪತ್ತೆಯಾಗಿವೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

