
ಧಾರವಾಡ : ನವ ಕರ್ನಾಟಕ ಚಲನಚಿತ್ರ ಅಕಾಡೆಮಿ ಸಹಯೋಗದಲ್ಲಿ 2021ರ ನ.19,20 ಹಾಗೂ 21 ರಂದು ಮೂರು ದಿನಗಳ ಕರ್ನಾಟಕ ಅಂತರಾಷ್ಟ್ರೀಯ ಚಲನಚಿತ್ರೋತ್ಸವ, ಕಿರುಚಿತ್ರ ಪ್ರದರ್ಶನ, ಪ್ರಶಸ್ತಿಗಳ ವಿತರಣೆ ಹಾಗೂ ಸಿನೆಮಾಗಳ ಪ್ರದರ್ಶನವು ಸತ್ತೂರಿನ ಹೊಟೇಲ್ ಟ್ರಾವಲ್ ಇನ್‌ನಲ್ಲಿ ನಡೆಯಲಿದೆ ಎಂದು ಅಕಾಡೆಮಿಯ ಅಧ್ಯಕ್ಷ ಡಾ. ಎಂ.ಎಮ. ಮುಮ್ಮಿಗಟ್ಟಿ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಪ್ರಥಮ ಬಾರಿಗೆ ಧಾರವಾಡದಲ್ಲಿ ಚಲನಚಿತ್ರೋತ್ಸವದ ಉತ್ಸವವು ಉತ್ತರ ಕರ್ನಾಟಕದ ಕಲಾವಿದರ ಪ್ರತಿಭಾ ಪ್ರದರ್ಶನಕ್ಕೆ ಇದೊಂದು ವೇದಿಕೆ.100 ಗಣ್ಯರು ಮತ್ತು ಕಲಾವಿದರು ಆಹ್ವಾನಿಸಿದ್ದಾರೆ. ಇಂದು ಮಾಲ್ಡೀವ್ ದೇಶದಿಂದ 14 ಚಿತ್ರಗಳ ಕಲಾವಿದರು ಪಾಲ್ಗೊಂಡಿದ್ದು, ಅವರ ಪರಿಚಯ ತಿಳಿಸಿದರು.
ನಟ- ನಟಿಯರಿಗೆ, ಬರಹಗಾರರಿಗೆ, ಕವಿಗಳಿಗೆ, ಲೇಖಕರಿಗೆ ಉತ್ತಮ ಅವಕಾಶ ಲಭಿಸಲಿದೆ. ಮಾಲ್ಡೀವ್ ದೇಶದಿಂದ 14 ಚಿತ್ರಗಳ ಕಲಾವಿದರು ಪಾಲ್ಗೊಳ್ಳುವರು. 25 ಕಿರುಚಿತ್ರ ಬಂದಿವೆ. ಪ್ರತಿ ಚಿತ್ರಕ್ಕೆ 20ರೂ. ಪ್ರವೇಶ ಶುಲ್ಕವಿದೆ. ಆಯ್ದ ಚಿತ್ರ ನ.20 21ರಂದು ಪ್ರದರ್ಶಿಸಲ್ಪಡಲಿವೆ ಎಂದರು.
ನ. ೨೧ರಂದು ಸಂಜೆ 5ಕ್ಕೆ ಸಮಾರೋಪ ಹಾಗೂ ಪ್ರಶಸ್ತಿ ಪ್ರದಾನ ನಡೆಯಲಿದ್ದು, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ನಾಳೆ ಸಂಜೆ 5ಕ್ಕೆ ಉತ್ಸವಕ್ಕೆ ಜಿಲ್ಲಾಧಿಕಾರಿ ನಿತೀಶ್ ಪಾಟೀಲ ಚಾಲನೆ ನೀಡಲಿದ್ದಾರೆ. ಕಲಾ ಪೋಷಕರಾದ ಡಾ. ಶಿವಕುಮಾರ ಸ್ವಾಮೀಜಿ ಮತ್ತು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಸುನೀಲ ಪುರಾಣಿಕ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

