Breaking News

ಇಂದಿನಿಂದ ವಿದ್ಯುತ್ ಚಾಲಿತ ರೈಲು ಸಂಚಾರ : ಭಗವಂತ ಖೂಬಾ

ಬೀದರ: ವಿಕಾರಾಬಾದನಿಂದ ಪರಳಿವರೆಗಿನ 262 ಕೋಟಿ ರೂ. ವೆಚ್ಚದ 269 ಕಿ.ಮೀ. ರೈಲ್ವೆ ವಿದ್ಯುತ್ತೀಕರಣ ಕಾಮಗಾರಿ ಪೈಕಿ ವಿಕಾರಾಬಾದ-ಖಾನಾಪೂರ ನಡುವಿನ 105 ಕಿ.ಮೀ. ರೈಲ್ವೆ ಲೈನ್‌ ಕೆಲಸ ಕಾಮಗಾರಿ ಪೂರ್ಣಗೊಂಡಿದ್ದು, ಜ.24ರಿಂದ ಈ ಹಳಿಗಳ ಮೂಲಕ ರೈಲು ಸಂಚಾರ ಆರಂಭವಾಗಲಿದೆ ಎಂದು ಕೇಂದ್ರ ರಸಗೊಬ್ಬರ ಮತ್ತು ರಸಾಯನಿಕ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.

ವಿದ್ಯುತ್ತೀಕರಣ ಲೈನ್‌ನಲ್ಲಿ ಟ್ರಯಲ್‌ ರನ್‌ ಕೂಡ ಮುಗಿದಿದ್ದು, ನಾಳೆಯಿಂದ ಬೀದರ- ಯಶವಂತಪುರ (16571, ನಾಲ್ಕು ದಿನ) ಮತ್ತು ಯಶವಂತಪುರ- ಬೀದರ (16572 ನಾಲ್ಕು ದಿನ) ರೈಲು ಸಂಚರಿಸಲಿದೆ. ಜತೆಗೆ ಬೀದರ- ಹೈದ್ರಾಬಾದ (17010), ಹೈದ್ರಾಬಾದ- ಬೀದರ ಇಂಟರ್‌ಸಿಟಿ (17009), ಬೀದರ- ಮಚ್ಚಲಿಪಟ್ನಂ (12750), ಮಚ್ಚಲಿಪಟ್ನಂ- ಬೀದರ (12749) ಪ್ರತಿನಿತ್ಯ ರೈಲುಗಳು ಈ ವಿದ್ಯುತ್ತೀಕರಣಗೊಂಡ ರೈಲ್ವೆ ಲೈನ್‌ ಮೂಲಕ ಚಲಿಸಲಿವೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

Share News

About admin

Check Also

ಸಿಲಿಂಡರ್ ಸ್ಫೋಟಗೊಂಡು 20ಕ್ಕೂ ಹೆಚ್ಚು ಕಾರ್ಮಿಕರ ಶೆಡ್‌ಗಳು ಭಸ್ಮ!

ಕಲಬುರಗಿ ಜಿಲ್ಲೆಯ ಹೊನ್ನಕಿರಣಗಿ ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಗುಲ್ಬರ್ಗಾ ಸಿಮೆಂಟ್ ಕಾರ್ಖಾನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭಾರೀ ಅಗ್ನಿ …

Leave a Reply

Your email address will not be published. Required fields are marked *