ಸವದತ್ತಿ : ತಾಲೂಕಿನ ಚಿಕ್ಕುಂಬಿ ಗ್ರಾಮದ
ಬಡ ಕುಟುಂಬದಲ್ಲಿ ಜನಿಸಿದ ಅರುಣ ಮೇಟಿ
ಇವರು, ಗ್ರಾಮೀಣ ಭಾಗದಲ್ಲಿ ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪಡೆದು ನಂತರ ಪಿಯು ವಿಜ್ಞಾನದಲ್ಲಿ ಶೇ. 80 ರಷ್ಟು ಅಂಕ ಗಳಿಸಿದರು. ಅವರ ಪರಿಶ್ರಮಕ್ಕೆ ಮೊದಲ ಪ್ರಯತ್ನದಲ್ಲಿಯೇ ರಾಜ್ಯಕ್ಕೆ 75 ನೇ ರ‍್ಯಾಂಕ್ ಪಡೆದು ಪಿಎಸ್‍ಐ ಆಗಿ ಆಯ್ಕೆಯಾಗಿದ್ದಾರೆ.
ಸ್ಪರ್ಧಾತ್ಮಕ ಪರೀಕ್ಷೆಗೆ ಅಣಿಯಾಗಲು ಬಿ.ಎ ಪದವಿ ಪಡೆದಿದ್ದಾರೆ.ಇವರ ತಂದೆ ಕಲ್ಲಪ್ಪ ಸಾರಿಗೆ ಸಂಸ್ಥೆಯ ಬಸ್ ಕಂಡಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಆಯ್ಕೆಗೆ ಗ್ರಾಮದ ಜನತೆ ಹರ್ಷ ವ್ಯಕ್ತಪಡಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

