Breaking News

ಪವರ್ ಸ್ಟಾರ್ ಅಭಿನಯದ ಜೇಮ್ಸ್​ ಚಿತ್ರದ ​ ಪೋಸ್ಟರ್ ಬಿಡುಗಡೆ


ಗಣರಾಜ್ಯೋತ್ಸವದ ದಿವವೇ ಪುನೀತ್​ ರಾಜ್ ಕುಮಾರ್ ಅವರ ಕೊನೆಯ ಚಿತ್ರ ‘ಜೇಮ್ಸ್​’ ಚಿತ್ರದ ಸ್ಪೆಷಲ್​ ಪೋಸ್ಟರ್ ಬಿಡುಗಡೆಯಾಗಿದೆ.

ಪುನೀತ್​ ಅವರ ಜನ್ಮದಿನದ ಪ್ರಯುಕ್ತ ಮಾರ್ಚ್​
17ರಂದು ಸಿನಿಮಾ ತೆರೆಗೆ ಬರುವ ನಿರೀಕ್ಷೆ ಇದೆ.ಪುನೀತ್​ ಹೀರೋ ಆಗಿ ನಟಿಸಿದ ಕೊನೆಯ ಚಿತ್ರ ‘ಜೇಮ್ಸ್​’ ಬಗ್ಗೆ ಬೆಟ್ಟದಷ್ಟು ನಿರೀಕ್ಷೆ ಇದೆ. ಈಗ ಹೊಸದಾಗಿ ರಿಲೀಸ್​ ಆಗಿರುವ ಪೋಸ್ಟರ್​ ಈ ಸಿನಿಮಾದ ಮೇಲಿದ್ದ ನಿರೀಕ್ಷೆಯನ್ನು ದುಪ್ಟಟ್ಟು ಮಾಡಿದೆ.

ಪೋಸ್ಟರ್​ ಕಂಡು ಅಪ್ಪು ಅಭಿಮಾನಿಗಳು ಅಪ್ಪು ವಿ ಮಿಸ್​ ಯೂಅಂತಿದ್ದಾರೆ. ಈ ಸಿನಿಮಾದ ಶೂಟಿಂಗ್​ ಇತ್ತೀಚೆಗೆ ಪೂರ್ಣಗೊಂಡಿತ್ತು. ಈಗ ಗಣರಾಜ್ಯೋತ್ಸವದ ಪ್ರಯುಕ್ತ ಸಿನಿಮಾದಿಂದ ವಿಶೇಷ ಪೋಸ್ಟರ್​ ಒಂದು ರಿಲೀಸ್​ ಆಗಿದೆ. ಅಪ್ಪು ಅಗಲಿಕೆ ನೋವಲ್ಲಿ ಕಾಲ ಕಳೆಯುತ್ತಿರುವ ಅಭಿಮಾನಿಗಳಿಗೆ ಈ ವಿಚಾರ ಖುಷಿ ನೀಡಿದೆ. ಮತ್ತೊಂದೆಡೆ ಈ ಸಂಭ್ರಮವನ್ನು ಅಪ್ಪು ಅವರ ಜೊತೆ ಆಚರಿಸಲು ಇನ್ನೇಂದು ಸಾಧ್ಯವಿಲ್ಲ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

Share News

About admin

Check Also

ವೆಂಕಟಗಿರಿಕೋಟೆ ಗಲಾಟೆ 7 ಮಂದಿ ವಿರುದ್ಧ ಪ್ರಕರಣ

ಚಿಂತಾಮಣಿ: ನಗರದ ವೆಂಕಟಗಿರಿಕೋಟೆ ಬಡಾವಣೆಯಲ್ಲಿ ಏ.13ರಂದು ಸಂಜೆ ಕೈಕೈ ಮಿಲಾಯಿಸಿದವರನ್ನು ಗಸ್ತಿನಲ್ಲಿದ್ದ ಪೊಲೀಸರು ತಡೆದು ಬುದ್ಧಿ ಹೇಳಿದರೂ ಕೇಳದೆ ಮುಂದುವರಿದು …

Leave a Reply

Your email address will not be published. Required fields are marked *