ಕೋಲಾರ: ‘ಕಾಂಗ್ರೆಸ್ ಬಿಟ್ಟು ಬಂದ ನಮಗೆ ಮತ್ತೆ ಆ ಪಕ್ಷಕ್ಕೆ ಹೋಗುವ ಅನಿವಾರ್ಯತೆ ಇಲ್ಲ, ಬಿಜೆಪಿ ನಮ್ಮನ್ನು ಗೌರವಯುತವಾಗಿ ನಡೆಸಿಕೊಂಡಿದೆ’ ಎಂದು ತೋಟಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಮುನಿರತ್ನ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ‘ಒಂದು ವೇಳೆ ಕಾಂಗ್ರೆಸ್ ಬಿಟ್ಟು ಬಂದವರ ಪೈಕಿ ಕನಿಷ್ಠ ಒಬ್ಬರೂ ಕಾಂಗ್ರೆಸ್‌ಗೆ ವಾಪಸ್ ಹೋದರೆ ಸಿದ್ದರಾಮಯ್ಯ ಅವರು ಆ ಪಕ್ಷದಲ್ಲಿ ಇರುವುದಿಲ್ಲ.ಏಕೆಂದರೆ ಸಿದ್ದರಾಮಯ್ಯರು ಕೊಟ್ಟ ಮಾತಿನಂತೆ ನಡೆದುಕೊಳ್ಳುವವರು. ನಾವು ಏನಾದರೂ ಕಾಂಗ್ರೆಸ್‌ಗೆ ವಾಪಸ್ ಹೋದರೆ ರಮೇಶ್‌ಕುಮಾರ್ ಮತ್ತು ಸಿದ್ದರಾಮಯ್ಯ ಆ ಪಕ್ಷ ಬಿಡುವವರಲ್ಲಿ ಮೊದಲಿಗರಾಗಿರುತ್ತಾರೆ’ ಎಂದು ತಿಳಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

