Breaking News

ಬಿಟ್ಟು ಹೋದವರನ್ನ ಮತ್ತೆ ಕರೆದುಕೊಳ್ಳುವುದಿಲ್ಲ : ಸಿದ್ದರಾಮಯ್ಯ

ಬೆಂಗಳೂರು: ಬಿಜೆಪಿ ಮತ್ತು ಕಾಂಗ್ರೆಸ್ ನ ಹಲವು ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ ಎಂದು ಸಿದ್ದರಾಮಯ್ಯ ಬಾಂಬ್ ಸಿಡಿಸಿದ್ದರು. ಅದಕ್ಕೆ ಬಿಜೆಪಿ ನಾಯಕರು ಕೆಂಡಾಮಂಡಲಾರಾಗಿದ್ದರು.ಸಚಿವ ಆರ್ ಅಶೋಕ್ ಕೂಡ ಆ ವಿಚಾರಕ್ಕೆ ಗರಂ ಆಗಿ ಉತ್ತರ ಕೊಟ್ಟಿದ್ದರು.

ಸೂರ್ಯ ಚಂದ್ರ ಒಂದಾದರೂ ಬಿಟ್ಟು ಹೋದವರನ್ನ ಸೇರಿಸಿಕೊಳ್ಳಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು. ಈಗ ಈ ರೀತಿ ಮಾತಾಡುತ್ತಿದ್ದಾರಲ್ಲ ಎಂದಿದ್ದರು. ಇದೇ ವಿಚಾರಕ್ಕೆ ಇದೀಗ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಬಿಟ್ಟು ಹೋದವರನ್ನ ಮತ್ತೆ ಕರೆದುಕೊಳ್ತೇವೆ ಎಂದು ನಾನು ಎಲ್ಲಿಯೂ ಹೇಳಿಲ್ಲ ಎಂದು ಮತ್ತೊಂದು ಶಾಕ್ ನೀಡಿದ್ದಾರೆ.

ಇದೇ ವೇಳೆ ಮುಂದಿನ ವಿಧಾನಸಭಾ ಚುನಾವಣೆಗೆ ನಿಲ್ಲುವ ಬಗ್ಗೆ ಮಾತನಾಡಿ, ನನಗೆ ಎಲ್ಲಾ ಕಡೆಯಿಂದಲೂ ಒತ್ತಡ ಇದೆ. ಕೋಲಾರ, ಕೊಪ್ಪಳ, ಚಾಮಾರಾಜಪೇಟೆ, ವರುಣಾ, ಚಾಮುಂಡೇಶ್ವರಿಯಲ್ಲೂ ನಿಲ್ಲಿ ಎಂದು ಹೇಳುತ್ತಿದ್ದಾರೆ. ಆದ್ರೆ ನಾನೇ ಬೇಡ ಅಂತ ಸುಮ್ಮನಾಗಿದ್ದೀನಿ ಎಂದು ಯಾವ ಕ್ಷೇತ್ರ ಅಂತ ಹೇಳದೆ ಹಾಗೆಯೇ ಕ್ಯೂರೊಯಾಸಿಟಿ ಉಳಿಸಿದ್ದಾರೆ.

Share News

About admin

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *