Breaking News

ಪವರ್​ಸ್ಟಾರ್ ಅಗಲಿ 3 ತಿಂಗಳು : ಸಸಿ ನೆಟ್ಟ ಭಾವುಕರಾದ ರಾಘಣ್ಣ

ಬೆಂಗಳೂರು: ಪವರ್​ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನರಾಗಿ ಇಂದಿಗೆ ಮೂರು ತಿಂಗಳು ಕಳೆದಿದೆ. ಕಳೆದ ವರ್ಷ ಅಕ್ಟೋಬರ್ 29 ರಂದು ಹೃದಯಾಘಾತದಿಂದ ಪುನೀತ್​ ರಾಜ್​ ಕುಮಾರ್​ ಇಹಲೋಕ ತ್ಯಜಿಸಿದ್ದರು.  ಪುನೀತ್ ಸಮಾಧಿ ಬಳಿ ಕುಟುಂಬಸ್ಥರು ಪೂಜೆ ಸಲ್ಲಿಸಿದ್ದಾರೆ.

ಸಮಾಧಿ ಬಳಿ ಪುನೀತ್ ರಾಜ್ ಕುಮಾರ್ ಅವರಿಗೆ ಇಷ್ಟವಾದ ತಿಂಡಿಗಳನಿಟ್ಟು ಕುಟುಂಬಸ್ಥರು ನಮನ ಸಲ್ಲಿಸಿದ್ದಾರೆ. ಪೂಜೆ ಬಳಿಕ ಅಶ್ವಿನಿ ಪುನೀತ್ ರಾಜ್ ಕುಮಾರ್, ಅಭಿಮಾನಿಗಳಿಗೆ ಬಾದಾಮಿ, ಸೀಬೆ, ಮಾವು, ತೇಗ, ಹಲಸಿನ ಸಸಿಗಳನ್ನು ವಿತರಿಸಿದ್ದಾರೆ.

ಸಮಾಧಿ ಬಳಿ ಅಶ್ವಿನಿ ಪುನೀತ್​ ರಾಜ್​ಕುಮಾರ್,​ ಪುತ್ರಿ ಧೃತಿ , ರಾಘವೇಂದ್ರ ರಾಜ್ ಕುಮಾರ್ ಮತ್ತು ಅವರ ಪತ್ನಿ ಹಾಗೂ ವಿಜಯ್ ರಾಘವೇಂದ್ರ, ಧೀರೇನ್​ ರಾಮ್ ಕುಮಾರ್, ಪುನೀತ್ ಸಹೋದರಿ ಲಕ್ಷ್ಮೀ ಹಾಗೂ ಎಸ್.ಎ.ಗೋವಿಂದ್​ ರಾಜು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ.

Share News

About BigTv News

Check Also

ಅತ್ಯಾಚಾರ ಎಸೆಗಿದವರ ಮೇಲೆ‌ ಪ್ರತೀಕಾರ – ಅಪಹರಣ ಮಾಡಿ ಸಿಕ್ಕಿಬಿದ್ದ ಆರೋಪಿಗಳು!

ಬೆಂಗಳೂರು: ಮಾರತ್ತಹಳ್ಳಿಯಲ್ಲಿ ಸ್ನೇಹಿತನ ಪ್ರೇಯಸಿಯನ್ನು ಕಾಲ್‌ಗರ್ಲ್ ಎಂದು ತಪ್ಪಾಗಿ ಭಾವಿಸಿ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ, ಪ್ರತೀಕಾರಕ್ಕಾಗಿ ಇಬ್ಬರನ್ನು ಅಪಹರಿಸಿ …

Leave a Reply

Your email address will not be published. Required fields are marked *