Breaking News

ಭತ್ತದ ಗದ್ದೆಗಳಲ್ಲಿ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ಮಾಡಿದ ಅನ್ನದಾತರು



ಗಂಗಾವತಿ : ಭತ್ತದ ಗದ್ದೆಗಳಲ್ಲಿ ರಸಗೊಬ್ಬರದ ಚೀಲವಿಟ್ಟು ರೈತರು ತಾಲ್ಲೂಕಿನ ಆಜಾದ್ ನರಸಾಪುರದಲ್ಲಿ ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಹಾಗೂ ಎಪಿಎಂಸಿ ನಿರ್ದೇಶಕ ರೆಡ್ಡಿ ಮಾತನಾಡಿ,ಕಳೆದ 2 3 ತಿಂಗಳ ಇಂದೆ 50 ಕೆ.ಜಿ.  ಪೊಟ್ಯಾಷ್‌ಗೆ 950-1050 ರೂ. ಇದ್ದ ದರ ಇದೀಗ 1,700 ರೂ.ಗೆ ಏರಿಕೆಯಾಗಿದೆ. ಜತೆಗೆ ಮಾರುಕಟ್ಟೆಯಲ್ಲಿ ಕೊರತೆಯೂ ಉಂಟಾಗಿದ್ದು, ಪೊಟ್ಯಾಷ್‌ ಬಳಸಬೇಕಾಗಿರುವ ಬೆಳೆಗಾರರು ಗೊಬ್ಬರ ಸಿಗದೆ ಕಂಗಾಲಾಗಿದ್ದಾರೆ.ಕಳೆದ ತಿಂಗಳಲ್ಲಿ 50 ಕೆ.ಜಿ. ಪೊಟ್ಯಾಷ್‌ಗೆ 950-1050 ರೂ. ಇತ್ತು. ಅದೀಗ 1,700 ರೂ.ಗೆ ಏರಿಕೆಯಾಗಿದೆ. ಒಂದೆಡೆ ಕೃಷಿ ಇಲಾಖೆಯು ರಸಗೊಬ್ಬರದ ಕೊರತೆಯಿಲ್ಲ ಎನ್ನುತ್ತಿದೆ.

ಆದರೆ ಮಾರಾಟಗಾರರು, ‘ಪೊಟ್ಯಾಷ್‌ ಸ್ಟಾಕ್‌ ಇಲ್ಲ. ಪೊಟ್ಯಾಷ್‌ ಮೊದಲಾದ ರಸಗೊಬ್ಬರಗಳ ಬೆಲೆಯಲ್ಲಿ ಶೇ. 30ರಷ್ಟು ದರ ಏರಿಕೆ ಮಾಡಲಾಗಿತ್ತು. ದರ ಏರಿಕೆಯನ್ನು ಸುಧಾರಿಸಿಕೊಳ್ಳುವ ಮುನ್ನವೇ ಪೊಟ್ಯಾಷ್‌ ದರ ಮತ್ತೆ ಏರಿಕೆ ಮಾಡಲಾಗಿದೆ.”ವರ್ಷಕ್ಕೆ ಎರಡು ಮೂರು ಬಾರಿ ರಸಗೊಬ್ಬರಗಳ ದರ ಹೆಚ್ಚಿಸಿದರೆ ರೈತರು ಏನು ಮಾಡಬೇಕೆಂದು ರೈತ ಮುಖಂಡರು ಪ್ರಶ್ನಿಸುತ್ತಿದ್ದಾರೆ.ಜಿಲ್ಲಾ ಸಚಿವರಾಗಲಿ ಕನಕಗಿರಿ ವಿಧಾನಸಭಾ ಕ್ಷೇತ್ರದ ಶಾಸಕ ದಡೇಸೊಗೂರು ಬಸವರಾಜ್ ರೈತರಿಗೆ ಆಗುವ ತೊಂದರೆಗಳ ಬಗ್ಗೆ ಅನ್ಯಾಯದ ಬಗ್ಗೆ ಧ್ವನಿ ಎತ್ತುತ್ತಿಲ್ಲ.ಶಾಸಕರಿಗೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ ಎಂದರು.

Share News

About admin

Check Also

ಮದುವೆಯಾಗಿ ಮಕ್ಕಳಿದ್ರೂ ಅಕ್ರಮ ಸಂಬಂಧ: ರೈಲಿಗೆ ತಲೆಕೊಟ್ಟು ವಿವಾಹಿತೆಯೊಂದಿಗೆ ಯುವಕ ಆತ್ಮಹತ್ಯೆ

ಮಂಡ್ಯದ ವಿಸಿ ಫಾರಂ ರಸ್ತೆಯ ರೈಲ್ವೆ ಹಳಿಯಲ್ಲಿ ರೈಲಿಗೆ ತಲೆಕೊಟ್ಟು ವಿವಾಹಿತೆ ಸಹನಾ (25) ಮತ್ತು ರಾಹುಲ್ (23) ಆತ್ಮಹತ್ಯೆಗೆ …

Leave a Reply

Your email address will not be published. Required fields are marked *