ಕೇಂದ್ರ ಸರ್ಕಾರದ ವಿರುದ್ಧದ ಕಾಂಗ್ರೆಸ್ ಪ್ರತಿಭಟನೆ ಹುಬ್ಬಳ್ಳಿಯಲ್ಲಿ ಆರಂಭ,ಸಿಲಿಂಡರ್ ಗಳಿಗೆ ಮಾಲಾರ್ಪಣೆ ಮಾಡಿ ಭಾಷಣ ಆರಂಭಿಸಿರುವ ನಾಯಕರು. ಪ್ರತಿಭಟನೆ ಕಾರ್ಯಕ್ರಮದಲ್ಲಿ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಣದೀಪ್ ಸುರ್ಜೀವಾಲ ಸಿಎಂ ಸಿದ್ದರಾಮಯ್ಯ ,ಡಿಸಿಎಂ ಡ್ ಕೆ ಶಿವಕುಮಾರ್ ಪ್ರಮುಖ ಆಕರ್ಷಣೆ ಆಗಿದ್ದರು. ಸುಪ್ರೀಂ ಕೋರ್ಟ್ ಜಡ್ಜಮೆಂಟ್ ಗಳ ಬಗ್ಗೆ ಬಿಜೆಪಿಯವರು ಮಾತನಾಡುತ್ತಾರೆ. ಅವರ ಪರವಾಗಿ ಇದ್ದರೆ ಅದರ ಪರವಾಗಿ ಮಾತನಾಡುತ್ತಾರೆ, ವಿರುದ್ದವಾಗಿದ್ರೆ ಅವುಗಳ ವಿರುದ್ದವಾಗಿ ಮಾತನಾಡುತ್ತಾರೆ. ವಿರುದ್ಧ ಬಂದರೆ ಬಿಜೆಪಿ ನ್ಯಾಯಾಂಗದ ಮೇಲೆ ಸವಾರಿ ಮಾಡಲು ಯತ್ನಿಸುತ್ತದೆ. ಬಿಜೆಪಿ ಅಧಿಕಾರಕ್ಕೆ ಬರೋ ಮೊದಲು ಒಂದು ತೊಲೆ ಬಂಗಾರ 27 ಸಾವಿರ ಇತ್ತು,ಇಂದು ಅದು ತೊಂಬತ್ತು ಸಾವಿರ ದಾಟಿದೆ. ಕೇಂದ್ರ ಸರ್ಕಾರ ಸಬ್ಸಿಡಿ ಜಾಸ್ತಿ ನೀಡಿದ್ರೆ ಮೂವತ್ತು ರೂಪಾಯಿಗೆ ಲೀಟರ್ ಪೆಟ್ರೋಲ್ ಸಿಗುತ್ತೆ. ಅಗತ್ಯ ವಸ್ತುಗಳು ಗಗನಕ್ಕೇರಿವೆ. ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನಕ್ಕೆ ನುಗ್ಗಿ ಸೇಡು ತೀರಿಸಿಕೊಳ್ಳಲಿ.ಪಾಕಿಸ್ತಾನದವರನ್ನು ಬಗ್ಗು ಬಡಿಯಲಿ.ಕೇಂದ್ರದ ಜೊತೆ ನಾವಿದ್ದೇವೆ,ಆದ್ರೆ ಎಲ್ಲದರಲ್ಲೂ ರಾಜಕಾರಣ ಮಾಡಬಾರದು, ದಯಮಾಡಿ ಪಾಕಿಸ್ತಾನಕ್ಕೆ ನುಗ್ಗಿ ಅವರನ್ನು ಹೊಡಿಯಿರಿ ಎಂದು ಹೇಳಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

