Breaking News

ಸಿ.ಎಂ.ಇಬ್ರಾಹಿಂಗೆ ಮಾತ್ರವಲ್ಲ ಅವರ ಸಮುದಾಯಕ್ಕೂ ನಷ್ಟವಾಗಿದೆ: ಎಸ್. ಆರ್.ಪಾಟೀಲ

ಹುಬ್ಬಳ್ಳಿ: ಸಿ.ಎಂ.ಇಬ್ರಾಹಿಂ ಅವರನ್ನು ಸೌಹಾರ್ದ ಭೇಟಿಯಾಗಿ ಬಂದಿದ್ದೆನೆ. ಭೇಟಿಯ ನಂತರ ಏನೆಲ್ಲಾ ಚರ್ಚೆಯಾಗಿದೆ ಎನ್ನುವುದನ್ನು ಹೇಳುತ್ತೇ‌ನೆ. ನಾನು ಎಲ್ಲಿಯೂ ಪಕ್ಷ ಬಿಡುತ್ತೇನೆ ಅಂತ ಹೇಳಿಲ್ಲ. ನಾನು ವಿಪಕ್ಷ ನಾಯಕನಿದ್ದಾಗ ಸಾಕಷ್ಟು ಬೆಂಬಲ‌ ನೀಡಿದ್ದರು.ಅವರಿಗೆ ವಿಪಕ್ಷ ನಾಯಕ ಸ್ಥಾನ ಸೀಗಬೇಕಿತ್ತು. ಕೇವಲ ಅದು ಅವರಿಗೆ ಆದ ನಷ್ಟ ಅಲ್ಲ. ಆ ಸಮೂದಾಯಕ್ಕೂ ನಷ್ಟ ಎಂದು ವಿಧಾನ ಪರಿಷತ್ ಮಾಜಿ ವಿಪಕ್ಷ ನಾಯಕ ಎಸ್.ಆರ್.ಪಾಟೀಲ ಹೇಳಿದರು.

ಸಿ.ಎಂ.ಇಬ್ರಾಹಿ ಭೇಟಿಗಾಗಿ ಆಗಮಿಸಿದ ವೇಳೆ ಹುಬ್ಬಳ್ಳಿಯ ಖಾಸಗಿ ಹೋಟೆಲ್ ನಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಅವರು ಕೂಡಾ ನೋವು ತೋಡಿಕೊಂಡಿದ್ದಾರೆ. ಅವರ ಮನವೊಲಿಸುವ ಕೆಲಸ ಮಾಡ್ತೆನೆ. ಪಕ್ಷದಲ್ಲೆ ಉಳಿಯುವಂತೆ ಮನವೊಲಿಕೆ ಪ್ರಯತ್ನ ಮಾಡುತ್ತೇನೆ ಎಂದರು.

ಪಕ್ಷದಲ್ಲಿ ಹಿರಿಯರ ಕಡೆಗಣನೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಪಕ್ಷದಲ್ಲಿ ದ್ವಿತೀಯ ಹಂತದ ನಾಯಕರು ಬೆಳೆದರೇ ತಪ್ಪೇನು…? ಇದು ಪಕ್ಷದ ಹೈಕಮಾಂಡ‌ ನಿರ್ಧಾರ. ಅದಕ್ಕೆ ವಯುಕ್ತಿಕವಾಗಿ ಬದ್ದವಾಗಿದ್ದೆನೆ. ಇಬ್ರಾಹಿಂ ಅವರ ಜೊತೆ ಮಾತನಾಡುತ್ತೆನೆ. ಆ ಬಳಿಕ ಎಲ್ಲವನ್ನೂ ಹೇಳುತ್ತೇನೆ ಎಂದು ಅವರು ಹೇಳಿದರು.

Share News

About admin

Check Also

ಸಿಲಿಂಡರ್ ಸ್ಫೋಟಗೊಂಡು 20ಕ್ಕೂ ಹೆಚ್ಚು ಕಾರ್ಮಿಕರ ಶೆಡ್‌ಗಳು ಭಸ್ಮ!

ಕಲಬುರಗಿ ಜಿಲ್ಲೆಯ ಹೊನ್ನಕಿರಣಗಿ ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಗುಲ್ಬರ್ಗಾ ಸಿಮೆಂಟ್ ಕಾರ್ಖಾನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭಾರೀ ಅಗ್ನಿ …

Leave a Reply

Your email address will not be published. Required fields are marked *