ಧಾರವಾಡ ಡಬಲ್ ಮರ್ಡರ್ ಪ್ರಕರಣ ಸಂಭಂದಿಸಿದಂತೆ ನಾಲ್ವರು ಆರೋಪಿಗಳು ಪೊಲೀಸ್ ವಶಕ್ಕೆ. ಧಾರವಾಡ ವಿದ್ಯಾಗಿರಿ ಠಾಣೆಗೆ ಕರೆತಂದ ಪೊಲೀಸರು,
ಕಳೆದ ರಾತ್ರಿ ಕಮಲಾಪುರದಲ್ಲಿ ನಡೆದಿದ್ದ ರಿಯಲ್ ಎಸ್ಟೆಲ್ ಉದ್ಯಮಿ ಮಹಮ್ಮದ್ ಕುಡಚಿ ಕೊಲೆ ಮಾಡಲಾಗಿತ್ತು, ಇದೇ ವೇಳೆ ಕೊಲೆಗಾರರ ಮಧ್ಯದಲ್ಲಿ ಇದ್ದ ಓರ್ವ ವ್ಯಕ್ತಿ ಗಣೇಶ್ ಅನ್ನೋನಿಗೆ ಏಟು ಬಿದ್ದು ಆತ ಓಡಿ ಹೋಗುವಾಗ ದಾರಿ ಮಧ್ಯದಲ್ಲಿಯೇ ಸಾವನ್ನಪ್ಪಿದ್ದ.

ರಾತ್ರಿಯೇ ಪರಾರಿಯಾಗಿದ್ದ ಉಳಿದ ಆರೋಪಿಗಳು ಹತ್ಯೆ ಮಾಡಿದ ಬಳಿಕ ದಾಂಡೇಲಿಯಲ್ಲಿ ತಲೆಮರೆಸಿಕೊಂಡಿದ್ದರು.
ಪೊಲೀಸರ ಕಚಿತ ಮಾಹಿತಿ ಮೇರೆಗೆ ದಾಂಡೇಲಿಯಲ್ಲಿ ಹುಡುಕಾಟ ನಡೆಸಿದ್ದಾರೆ, ಪೊಲೀಸರ ಹುಡುಕಾಟದ ಸುದ್ದಿ ಕೇಳಿ ಆರೋಪಿಗಳು ಮುಂಡಗೋಡಕ್ಕೆ ಪರಾರಿ ಆಗಿದ್ದಾರೆ.
ಆರೋಪಿಗಳ ಬೆನ್ನೆಟ್ಟಿದ ಪೊಲೀಸರು ಮುಂಡಗೋಡದಲ್ಲಿ ಬಂಧಿಸಿ ಧಾರವಾಡಕ್ಕೆ ಕರೆತಂದ್ದಿದ್ದಾರೆ. ಬಂಧಿತ ಆರೋಪಿಗಳು ಅರ್ಬಾಜ್ ಹಂಚಿನಾಳ, ನದೀಮ್, ರಹಿಮ್ ಸೇರಿ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.
ಅರ್ಬಾಜ್, ಈ ಹಿಂದೆ ಕೊಲೆಯಾಗಿರುವ ರೌಡಿ ಶೀಟರ ಫ್ರೂಟ್ ಇರ್ಫಾನ್ ಪುತ್ರ, ಫ್ರೂಟ್ ಇರ್ಫಾನ್ ಜೊತೆ ರಿಯಲ್ ಎಸ್ಟೇಟ್ ಮಾಡುತ್ತಿದ್ದ ಮಹಮ್ಮದ ಕುಡಚಿ. ತಂದೆ ಫ್ರೂಟ್ ಇರ್ಫಾನ್ ಕೊಲೆ ಬಳಿಕ ಕುಡಚಿ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ ಅರ್ಬಾಜ್,
ಆಗಾಗ ಈ ಸಂಭಂದ ಇಬ್ಬರ ಮಧ್ಯೆ ಜಗಳ ನಡೆದಿದ್ದವು ಇದೇ ವೈಷಮ್ಯಕ್ಕೆ ಕುಡಚಿ ಹತ್ಯೆ ಮಾಡಿರುವುದು ಎಂದು ತಿಳಿದುಬಂದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

