Breaking News

ಬಡವ, ಶ್ರೀಮಂತ ಭೇದ ಬೇಡ, ಇಬ್ಬರ ಪ್ರಾಣ ಒಂದೇ : ಶಿವರಾಜ್‌ಕುಮಾರ್


ಮೈಸೂರು:ಪ್ರಸ್ತುತ ದಿನಗಳಲ್ಲಿ ಸಮಾಜಕ್ಕೆ ಆಸ್ಪತ್ರೆಗಳು ತೀರಾ ಅತ್ಯಗತ್ಯ. ‘ಬಡವರು ಮತ್ತು ಶ್ರೀಮಂತರ ಮಧ್ಯೆ ಯಾವುದೇ ಕಾರಣಕ್ಕೂ ಭೇದ ಬೇಡ. ಇಬ್ಬರ ಪ್ರಾಣವೂ ಒಂದೇ. ಇಬ್ಬರಿಗೂ ಒಂದೇ ಬಗೆಯ ಚಿಕಿತ್ಸೆ ನೀಡಬೇಕು’ ಎಂದು ನಟ ಶಿವರಾಜ್‌ಕುಮಾರ್ ಸಲಹೆ ನೀಡಿದರು.

ದಟ್ಟಗಳ್ಳಿಯಲ್ಲಿ ನಿರ್ಮಿಸಿರುವ ನಯನ ಕುಮಾರ‍‍್ಸ್‌ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.’ ಮೈಸೂರಿನ ಈ ಭಾಗದಲ್ಲಿ ಸುಸಜ್ಜಿತವಾದ ಆಸ್ಪತ್ರೆ ನಿರ್ಮಿಸಿರುವುದು ಸಮಯೋಚಿತ. ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಯಾರೇ ಬಂದರೂ ಎಲ್ಲರಿಗೂ ಸಮಾನ ಚಿಕಿತ್ಸೆ ನೀಡಬೇಕು’ ಎಂದು ತಿಳಿಸಿದರು.

ಪುನೀತ್‌ ರಾಜ್‌ಕುಮಾರ್ ಹೆಸರಿನಲ್ಲಿ ಎರಡು ಗಂಧದ ಗಿಡಗಳನ್ನು ಆಸ್ಪತ್ರೆಗೆ ನೀಡಿ, ಪೋಷಿಸಬೇಕು ಎಂದು ಮನವಿ ಮಾಡಿದರು.ಆಸ್ಪತ್ರೆಯ ಮುಖ್ಯಸ್ಥ ಕೆ.ಬಿ.ಕುಮಾರ್ ಮಾತನಾಡಿದರು. ಮೇಯರ್ ಸುನಂದಾ ಫಾಲನೇತ್ರ, ಪಾಲಿಕೆ ಸದಸ್ಯೆ ಎಂ.ಲಕ್ಷ್ಮಿ, ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಮುಖ್ಯ ಯೋಜನಾಧಿಕಾರಿ ಬಿ.ಗುರುಪ್ರಸಾದ್, ಆಸ್ಪತ್ರೆಯ ಖಜಾಂಚಿ ಎಚ್.ಪಿ.ಗೀತಾ ಕುಮಾರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಯನಕುಮಾರ್, ವ್ಯವಸ್ಥಾಪಕ ನಿರ್ದೇಶಕಿ ಶಿವಾನಿ ಕುಮಾರ್, ಟ್ರಸ್ಟಿಗಳಾದ ರತ್ಮಮ್ಮ, ಎಚ್.ಪಿ.ಭಾಸ್ಕರ್, ಕೆಇಆರ್‌ಎಸ್‌ನ ನಿವೃತ್ತ ಮುಖ್ಯ ಎಂಜಿನಿಯರ್ ಬಸವರಾಜ್ ಕೋಟಿ, ಕರ್ನಾಟಕ ವಿದ್ಯುತ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಆರ್.ರುದ್ರಯ್ಯ ಇದ್ದರು.

Share News

About admin

Check Also

ಆನ್‌ಲೈನ್ ಆಯಪ್‌ನಲ್ಲಿ ಸಾಲ ಪಡೆದ ಮಹಿಳೆಗೆ ಫೋಟೋ ಮಾರ್ಫಿಂಗ್ ಬೆದರಿಕೆ – ₹2.90 ಲಕ್ಷ ವಂಚನೆ!

ಮಂಗಳೂರು: ಆನ್‌ಲೈನ್ ಆಯಪ್ ಮೂಲಕ ಸಾಲ ಪಡೆದ ಮಹಿಳೆಯೊಬ್ಬರಿಗೆ ಫೋಟೋ ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ₹2.90 …

Leave a Reply

Your email address will not be published. Required fields are marked *