Breaking News

ಯೂಟ್ಯೂಬರ್ ಹಿಂದೂಸ್ತಾನಿ ಭಾವು ಬಂಧನ


ಮುಂಬೈ: 10 ಮತ್ತು 12 ನೇ ತರಗತಿಗಳಿಗೆ ಆನ್‌ಲೈನ್ ಪರೀಕ್ಷೆಗೆ ಒತ್ತಾಯಿಸಿ ಸೋಮವಾರ ಮುಂಬೈನ ಧಾರಾವಿಯಲ್ಲಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಗೆ ಸಂಬಂಧಿಸಿದಂತೆ ಪ್ರಸಿದ್ಧ ಯೂಟ್ಯೂಬರ್ ಹಿಂದೂಸ್ತಾನಿ ಭಾವು ಅವರನ್ನು ಮಂಗಳವಾರ (ಇಂದು) ಮುಂಬೈನಲ್ಲಿ ಧಾರಾವಿ ಪೊಲೀಸರು ಬಂಧಿಸಿದ್ದಾರೆ.

ಹಿಂದೂಸ್ತಾನಿ ಭಾವು ಅವರ ಮೂಲ ಹೆಸರು ವಿಕಾಸ್ ಫಟಕ್ ಎಂದಾಗಿದ್ದು, ಇವರು “ರುಖೋ ಜರಾ, ಸಬರ್ ಕರೋ.” ಡೈಲಾಗ್ ಮೂಲಕ ಭಾರಿ ಪ್ರಸಿದ್ದಿಯನ್ನು ಪಡೆದಿದ್ದಾರೆ. ಕೋವಿಡ್ ನಡುವೆ ಆನ್‌ಲೈನ್ ಪರೀಕ್ಷೆಗಳಿಗೆ ಒತ್ತಾಯಿಸಿ ಸೋಮವಾರ ಮುಂಬೈ ಮತ್ತು ನಾಗ್ಪುರದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಯ ನಂತರ, ಮಹಾರಾಷ್ಟ್ರದ ಶಿಕ್ಷಣ ಸಚಿವೆ ವರ್ಷಾ ಗಾಯಕ್‌ವಾಡ್ ಅವರ ನಿವಾಸದ ಬಳಿಯಿರುವ ಧಾರಾವಿ ಪ್ರದೇಶದಲ್ಲಿ ವಿದ್ಯಾರ್ಥಿಗಳು ಸೇರುವಂತೆ ಯೂಟ್ಯೂಬರ್ ಹಿಂದೂಸ್ತಾನಿ ಭಾವು ವೀಡಿಯೊದಲ್ಲಿ ಕರೆ ನೀಡಿದ್ದರು. ಹಾಗಾಗಿ, ಭಾವು ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಸೋಮವಾರ ಹೇಳಿದ್ದರು. 

Share News

About admin

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *