2022ನೇ ಸಾಲಿನ ಬಜೆಟ್‌ನ ಅಧಿವೇಶನವು ಜನವರಿ 31ರಿಂದ ಆರಂಭವಾಗಿದ್ದು, ಕೇಂದ್ರ ಬಜೆಟ್ ದಿನಕ್ಕೂ ಮೊದಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರ್ಥಿಕ ಸಮೀಕ್ಷೆ ಮಂಡಿಸಿದ್ದಾರೆ. ಆರ್ಥಿಕ ಸಮೀಕ್ಷೆಯನ್ನು ಪ್ರತಿ ಬಾರಿಯು ಕೇಂದ್ರ ಬಜೆಟ್ ಮಂಡನೆಯ ಒಂದು ದಿನ ಮೊದಲು ಮಂಡಿಸಲಾಗುತ್ತದೆ.
ನಿರ್ಮಲಾ ಸೀತಾರಾಮನ್‌ರ ನಾಲ್ಕನೇ ಬಜೆಟ್‌ನಲ್ಲಿ ಉದ್ಯೋಗಗಳು, ಆರೋಗ್ಯ ರಕ್ಷಣೆ ಮತ್ತು ಶಿಕ್ಷಣದ ಮೇಲಿನ ರಿಯಾಯಿತಿಗಳು, ತೆರಿಗೆ ವಿನಾಯಿತಿಗಳು ಮತ್ತು ಗಗನಕ್ಕೇರುತ್ತಿರುವ ಹಣದುಬ್ಬರವನ್ನು ನಿಭಾಯಿಸುವ ಕ್ರಮಗಳ ಭರವಸೆಯನ್ನು ಹೊಂದಿದ್ದಾರೆ. ಬಜೆಟ್ 2022-23ರ ಅಪ್‌ಡೇಟ್ ಇಲ್ಲಿ ಸಿಗಲಿದೆ…
ಬಜೆಟ್ ಅಧಿವೇಶನವು ಎರಡು ಭಾಗಗಳಲ್ಲಿ ನಡೆಯಲಿದೆ ಅಧಿವೇಶನದ ಮೊದಲ ಭಾಗವು ಫೆಬ್ರವರಿ 11, 2022 ರಂದು ಮುಕ್ತಾಯಗೊಳ್ಳುತ್ತದೆ. ಒಂದು ತಿಂಗಳ ಅವಧಿಯ ವಿರಾಮದ ನಂತರ, ಅಧಿವೇಶನದ ಭಾಗ ಎರಡು ಮಾರ್ಚ್ 14, 2022 ರಂದು ಪ್ರಾರಂಭವಾಗುತ್ತದೆ ಮತ್ತು ಏಪ್ರಿಲ್ 8, 2022 ರಂದು ಮುಕ್ತಾಯಗೊಳ್ಳುತ್ತದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

